Friday, March 14, 2025

Latest Posts

ರೈತರು ನಿಜವಾದ ವೀರರು: ಅನ್ನದಾತರ ದಿನಾಚರಣೆಗೆ ದಾಸ ದರ್ಶನ ಶುಭಾಶಯ

- Advertisement -

ಕೃಷಿ ಪ್ರಧಾನ ದೇಶವಾದ ಭಾರತದಲ್ಲಿಂದು ಅನ್ನದಾತರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆ ಅನೇಕ ಗಣ್ಯರು ದೇಶದ ಬೆನ್ನೆಲುಬಾಗಿರುವ ರೈತರನ್ನು ನೆನೆದು ಶುಭ ಕೋರುತ್ತಿದ್ದಾರೆ. ಕನ್ನಡ ಚಿತ್ರರಂಗದ ಡಿಬಾಸ್ ದರ್ಶನ್ ಸಹ ರೈತರ ದಿನಾಚರಣೆ ಶುಭಾ ಕೋರಿ, ರೈತರು ನಿಜವಾದ ವೀರರು ಎಂದು ಹೇಳಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ದರ್ಶನ್, ರೈತರು ನಿಜವಾದ ವೀರರಾಗಿದ್ದಾರೆ ಏಕೆಂದರೆ ಅವರ ಸಮರ್ಪಣೆ ಮತ್ತು ಶ್ರಮದಿಂದ, ಬಂಜರು ಭೂಮಿಯನ್ನು ಆಹಾರವನ್ನು ಉತ್ಪಾದಿಸುವ ಭೂಮಿಯಾಗಿ ಪರಿವರ್ತಿಸಿ ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿ ಇರಿಸಿ ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ…. ಅವರ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ…. ರೈತ ದಿನಾಚರಣೆಯ ಶುಭಾಶಯಗಳು ಎಂದಿದ್ದಾರೆ.

ಮಣ್ಣಿನಲ್ಲಿರುವ ಸುಖ ಎಲ್ಲೂ ಸಿಗದು-ಜಗ್ಗೇಶ್

ರೈತರ ದಿನಕ್ಕೆ ನವರಸ ಜಗ್ಗೇಶ್ ಕೂಡ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತಾತಚಿಕ್ಕಪ್ಪಂದಿರು ಹೂಡುತ್ತಿದ್ದ ನೇಗಿಲಮೇಲೆ ಬೆಳೆದ ರೈತರಕುಡಿ ನಾನು! 100%ಗೆ50%ಯುವಕರು ಈ ಕಾಯಕಬಿಟ್ಟು ಅಲ್ಪ ಆದಾಯಕ್ಕೆ ಪಟ್ಟಣಜೀವನಕ್ಕೆ ಹೋಗಿಬಿಟ್ಟರು!ಬಣಗುಡುತ್ತಿದೆ ಹೊಲಗದ್ದೆ!ಖಾಲಿಕೊಟ್ಟಿಗೆ! ಒಣಗಿದೆ ಗೊಬ್ಬರದಗುಂಡಿ! ಓಮನಸೆ ಮಣ್ಣಲ್ಲಿ ಇರುವ ಸುಖ ಎಲ್ಲುಸಿಗದು ಮರಳಿಮಣ್ಣಿಗೆ! ಕೊಂಡು ತಿನ್ನುವುದಕ್ಕಿಂತ ಬೆಳೆದುತಿನ್ನುವ!ಜೈಕಿಸಾನ್ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೇ ಪ್ರತಿವರ್ಷ ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ರೈತ ದಿನವನ್ನು ಆಚರಿಸಲಾಗುತ್ತದೆ. ರೈತರ ಕಲ್ಯಾಣ ಯೋಜನೆಗಳನ್ನು ಪರಿಚಯಿಸಿ ಜನಮನ್ನಣೆ ಗಳಿಸಿದ್ದರು.

- Advertisement -

Latest Posts

Don't Miss