ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ ಮಾತ್ರವಲ್ಲದೆ ಕೃಷಿ ಚಟುವಟಿಕೆಗಳಲ್ಲಿಯೂ ತಮ್ಮನ್ನೂ ತಾವು ತೊಡಗಿಸಿಕೊಂಡಿರುವುದು ಗೊತ್ತೇ ಇದೆ. ಶೂಟಿಂಗ್ ಗೆ ಬ್ರೇಕ್ ಸಿಕ್ಕಗಲೆಲ್ಲಾ ತಮ್ಮ ಫಾರಂ ಹೌಸ್ ನಲ್ಲಿ ಪ್ರಾಣಿ, ಪಕ್ಷಿಗಳ ಜೊತೆ ಕಾಲ ಕಳೆಯುವ ದಚ್ಚು ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಅದು ಯಾವುದೇ ಸಂಭಾವನೆ ಪಡೆಯದೆ ಅನ್ನೋದೆ ವಿಶೇಷ.

ಕೃಷಿ ಇಲಾಖೆಯ ರಾಯಭಾರಿ ಹುದ್ದೆ ಪಡೆದ ದರ್ಶನ್ ರನ್ನು ಇಂದು ಮೈಸೂರಿನಲ್ಲಿರುವ ದಚ್ಚು ಫಾರಂ ಹೌಸ್ ನಲ್ಲಿ ಕೃಷಿ ಸಚಿವರ ಬಿ.ಸಿ.ಪಾಟೀಲ್ ಭೇಟಿ ಮಾಡಿದ್ದಾರೆ. ಈ ವೇಳೆ ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಇಬ್ಬರು ಚರ್ಚೆ ನಡೆಸಿದ್ದಾರೆ. ಈಗಾಗ್ಲೇ ರೈತರ ಜೊತೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿರುವ ಕೃಷಿ ಸಚಿವರ ಜೊತೆ ದಚ್ಚು ಕೂಡ ರೈತರನ್ನು ಭೇಟಿ ನೀಡಿ ಅವರೊಂದಿಗೆ ಒಂದು ದಿನ ಕಾಲ ಕಳೆಯಲಿದ್ದಾರೆ.


ಈಗಾಗ್ಲೇ ಅರಣ್ಯ ಇಲಾಖೆ ರಾಯಭಾರಿಯಾಗಿರುವ ಡಿಬಾಸ್ ಇದೀಗ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕವಾಗಿರುವುದು ಅಭಿಮಾನಿಗಳಿಗೆ ಸಖತ್ ಕೃಷಿ ಕೊಟ್ಟಿದೆ.
