Sunday, September 8, 2024

Latest Posts

‘ರಾಬರ್ಟ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್- ಹೈದ್ರಾಬಾದ್ ಗೆ ಬಂದಿಳಿದ ಡಿಬಾಸ್

- Advertisement -

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ಸೌತ್ ಇಂಡಸ್ಟ್ರೀಯ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ರಾಬರ್ಟ್ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಮಾರ್ಚ್ 11ರಂದು ಕನ್ನಡದ ಜೊತೆ ತೆಲುಗು ಭಾಷೆಯಲ್ಲಿ ಸಿನಿಮಾ ತೆರೆಗಪ್ಪಳಿಸ್ತಿದ್ದು, ಈ ಹಿನ್ನೆಲೆ ತೆಲುಗು ಪ್ರೇಕ್ಷಕರನ್ನು ಅಟ್ರ್ಯಾಕ್ಷಟ್ ಮಾಡೋದಿಕ್ಕೆ ಚಿತ್ರತಂಡ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಅರೆಂಜ್ ಮಾಡಿದೆ. ಹೀಗಾಗಿ ದರ್ಶನ್ ಇವತ್ತು ಮುತ್ತಿನ ನಗರಿ ಹೈದ್ರಾಬಾದ್ ಗೆ ಬಂದಿಳಿದಿದ್ದಾರೆ. ಇಂದು ಬೆಳಗ್ಗೆ ಹೈದ್ರಾಬಾದ್ ಏರ್ ಪೋರ್ಟ್ ಗೆ ಬಂದಿಳಿದ ಡಿಬಾಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇಂದು ಸಂಜೆ 7 ಗಂಟೆಗೆ ಹೈದ್ರಾಬಾದ್ ನ ಜೆ ಆರ್ ಸಿ ಕನ್ವೆನ್ಷನ್ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿದ್ದು, ಮುಖ್ಯ ಅತಿಥಿಗಳಾಗಿ ಚಾಲೆಂಜಿಂಗ್ ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್ ಗೌಡ, ದೇವರಾಜ್ , ಜಗಪತಿ ಬಾಬು, ರವಿಶಂಕರ್ , ವಿನೋದ್ ಪ್ರಭಾಕರ್
ಆಶಾ ಭಟ್ ಹಾಗೂ ತೆಲುಗು ಚಿತ್ರರಂಗದ ಗಣ್ಯ ವ್ಯಕ್ತಿಗಳು ವಿತರಕರು, ಪ್ರದರ್ಶಕರು ಭಾಗಿಯಾಗಲಿದ್ದಾರೆ.

ವಿಶೇಷವಾಗಿ ಕರ್ನಾಟಕದಿಂದ ಅದ್ರಲ್ಲೂ ಉತ್ತರ ಕರ್ನಾಟಕದಿಂದ 50 ಕ್ಕೂ ಹೆಚ್ಚು ಬಸ್ ಗಳನ್ನು ಆಯೋಜಿಸಿದ್ದು, ಈ ಬಸ್ ಮೂಲಕ ದಚ್ಚು ಅಭಿಮಾನಿಗಳು ಹೈದ್ರಾಬಾದ್ ತಲುಪಲಿದ್ದಾರೆ.

ಇದಾದ ಬಳಿಕ ಗಂಡು ಮುಟ್ಟಿದ ನಾಡು ಹುಬ್ಬಳ್ಳಿಯಲ್ಲಿಯೂ ರಾಬರ್ಟ್ ಪ್ರೀ-ರಿಲೀಸ್ ಇವೆಂಟ್ ಈ ತಿಂಗಳ 28ರಂದು ನಡೆಯುತ್ತಿದ್ದು, ಈಗಾಗ್ಲೇ ಕಾರ್ಯಕ್ರಮಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ.

- Advertisement -

Latest Posts

Don't Miss