Wednesday, January 22, 2025

Latest Posts

ರಾಜ್ಯ ಸರ್ಕಾರಕ್ಕೆ ತಲೆನೋವಾದ ಛಲುವಾದಿ ಮಹಾಸಭಾ ಪ್ರತಿಭಟನೆ: ಬೆಂಗಳೂರು ಚಲೋ..!

- Advertisement -

ಹುಬ್ಬಳ್ಳಿ: ಸಿದ್ದರಾಮಯ್ಯ ಸರ್ಕಾರ ದಲಿತ ಬಲಗೈ ನಾಯಕರಿಗೆ ಸಂಪುಟದಲ್ಲಿ ಅವಕಾಶ ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಛಲುವಾಗಿ ಮಹಾಸಭಾ ನಾಯಕರಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಟ ಹಮ್ಮಿಕೊಂಡಿದ್ದು ಬೆಂಗಳೂರು ಚಲೋ ಕೈಗೊಂಡಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಛಲುವಾದಿ ಮಹಾ ಸಭಾ ವತಿಯಿಂದ ಹಮ್ಮಿಕೊಂಡಿರುವ ಬೆಂಗಳೂರು ಚಲೋ ಅಭಿಯಾನದಿಂದ ಹಮ್ಮಿಕೊಂಡಿದ್ದು ಸರ್ಕಾರಕ್ಕೆ ಮತ್ತೊಂದು ಟೆನ್ಶನ್ ತಂಡೊದ್ದಿದೆ. ದಶಕಗಳಿಂದ ಮೌನವಾಗಿದ್ದ ದಲಿತ ಬಲಗೈ ನಾಯಕರು ಈಗ ಕಾಂಗ್ರೆಸ್ ಸರ್ಕಾರ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಶಂಕರಾನಂದ ಬಳಿಕ ಸಚಿವ ಸಂಪುಟದಲ್ಲಿ ಅವಕಾಶ ನೀಡದೆ ಕಡೆಗಣುಸುತ್ತಿದ್ದಾರೆ. ಹತ್ತು ಜಿಲ್ಲೆಗಳದಲಿತ ನಾಯಕರಿಂದ ಪ್ರತಿಭಟನೆ ಹಿನ್ನೆಲೆ ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ.

ಕಿತ್ತೂರು ಕರ್ನಾಟಕ ಭಾಗದ ಪ್ರಮುಖ ನಿಗಮ ಮಂಡಳಿಗಳಿಗೆ ಕಿತ್ತೂರು ನಾಯಕರನ್ನು ಕಡೆಗಣಿಸಿ  ದಲಿತ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಕಳೆದ ಬಾರಿಯೂ ಅನ್ಯಾಯ ಮಾಡಿದ್ದರು ಈಗಲೂ ಅದೇ ಮುಂದುವರೆಸಿದ್ದಾರೆ ಹಾಗಾಗಿ ಹಬ್ಬಳ್ಳಿ ಪೂರ್ವ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿರುವ ಪ್ರಸಾದ್ ಅಬ್ಬಯ್ಯಗೆ ಸಚಿವ ಸ್ಥಅನ ನೀಡಿಲ್ಲ ಆದರೆ ಕೆಆರ್ಡಿಎಲ್  ನಿಗಮ ಮಂಡಳಿ ಅದ್ಯಕ್ಷ ಸ್ಥಾನ ನೀಡಬೇಕೆಂದು  ಬೆಂಗಳೂರು ಚಲೋ ಕೈಗೊಂಡಿರು.

ನಿನ್ನೆ ರಾಜ್ಯದ ನಾನಾ ಜಿಲ್ಲೆಗಳಿಂದ ಗದಗ ರಾಯಚೂರು ಕೊಪ್ಪಳ ಜಿಲ್ಲೆಗಳಿಂದ  ಛಲುವಾದಿ ಸಮುದಾಯದ ಮುಖಂಡರು ಬೆಂಗಳೂರಿಗೆ ತೆರಳಿ ಸಿಎಂ ಡಿಸಿಎಂ ಗೃಹ ಸಚಿವರನ್ನು ಭೇಟಿ ಮಾಡಿ ಪ್ರಸಾದ್ ಅಬ್ಬಯ್ಯಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಮನವಿ ಸಲ್ಲಿಸಲು ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ.

ರಜಾಕ್ ಕವಲಗೇರಿ ಹತ್ಯೆ ಪ್ರಕರಣ ನಾಲ್ವರನ್ನು ಬಂಧಿಸಿದ ಶಹರ ಠಾಣೆ ಪೊಲೀಸರು

Siddaramaiah : ಏನಿದು ದಸರಾ ರಜೆ ವಿವಾದ? ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಿಕ್ಷಕರು ಬರೆದ ಪತ್ರದಲ್ಲಿ ಏನಿದೆ?

BJP Protest; ಚಿತ್ರದುರ್ಗದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ಬೃಹತ್ ಪ್ರತಿಭಟನೆ..!

- Advertisement -

Latest Posts

Don't Miss