ನಿಜವಾದ ತತ್ವಜ್ಞಾನಿ ನಿಜವಾದ ರಾಜಕಾರಣಿ ಆಗೋದಕ್ಕೆ ಸಾಧ್ಯವಾಗೋದು ಎಂದು ಚಾಣಕ್ಯರೇ ಹೇಳಿದ್ದಾರೆ: ರೂಪಾ ಅಯ್ಯರ್

Sandalwood: ನಟಿ, ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಮೋದಿ ಬಗ್ಗೆ ಮತ್ತು ರಾಜಕೀಯದ ಬಗ್ಗೆಯೂ ಹಲವು ವಿಷಯಗಳನ್ನು ವಿವರಿಸಿದ್ದಾರೆ.

ಚಾಣಕ್ಯರು ನಿಜವಾದ ತತ್ವಜ್ಞಾನಿಯೇ ನಿಜವಾದ ರಾಜಕಾರಣಿ ಆಗೋದು ಎಂದು ಹೇಳಿದ್ದಾರೆ. ಅದೇ ರೀತಿ ನಮ್ಮ ಮೋದಿಯವರೇ ಈ ಮಾತಿಗೆ ಉದಾಹರಣೆ. ಯಾಕಂದ್ರೆ ನಾವು ತತ್ವಜ್ಞಾನಿಯಾದಾಗಲೇ, ನಾವು ಜಾತಿ ಬೇಧಗಳನ್ನು ಮಾಡದೇ, ರಾಜಕೀಯ ಮಾಡಲು ಸಾಧ್ಯ. ಹಾಗಾಗಿಯೇ ಹಿಂದಿನ ರಾಜಕಾರಣಿಗಳಲ್ಲಿ ಹಲವರು ತತ್ವಜ್ಞಾನಿಗಳಾಗಿದ್ದರು ಎಂದು ರೂಪಾ ಅಯ್ಯರ್ ಹೇಳುತ್ತಾರೆ.

ನಿಜವಾದ ತತ್ವಜ್ಞಾನಿ ಯಾರನ್ನೂ ಕೀಳಾಗಿ ನೋಡುವುದಿಲ್ಲ. ಆತ ಜಾತಿ ಬೇಧ ಮಾಡುವುದಿಲ್ಲ. ಲಂಚ ಪಡೆದು ಕೆಲಸ ಮಾಡುವುದಿಲ್ಲ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿರುತ್ತಾನೆ ಎಂದು ನಿರ್ದೇಶಕಿ ರೂಪಾ ಅಯ್ಯರ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author