ಮನುಷ್ಯ ಹೇಗೆ ಜೀವಿಸಬೇಕು, ಜೀವನದಲ್ಲಿ ಎಂಥ ನಿಯಮಗಳನ್ನು ಅಳವಡಿಸಿಕೊಂಡಿರಬೇಕು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಮನುಷ್ಯ ಶ್ರೀಮಂತನಾಗುವುದು ಹೇಗೆ ಎಂದು ಹೇಳಿರುವ ಚಾಣಕ್ಯರು, ಮನುಷ್ಯನ ದಡ್ಡತನದಿಂದಲೇ ಶ್ರೀಮಂತಿಕೆಗೆ ಧಕ್ಕೆ ಅಂತಲೂ ಹೇಳಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಅರ್ಥಶಾಸ್ತ್ರದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದ ಚಾಣಕ್ಯರು, ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರಿಸಿಕೊಳ್ಳುವ ಬಗ್ಗೆ ಮತ್ತು ಅದಕ್ಕೆ ಧಕ್ಕೆ ಬರದ ರೀತಿ ಹೇಗೆ ಇರಬೇಕು ಅಂತಲೂ ಹೇಳಿದ್ದಾರೆ. ಹಾಗಾದ್ರೆ ದಡ್ಡತನದಿಂದ ಹೇಗೆ ಸಿರಿತನಕ್ಕೆ ಧಕ್ಕೆ ಬರುತ್ತದೆ ಅನ್ನೋ ಬಗ್ಗೆ ತಿಳಿಯೋಣ..
ನಾವು ಕಷ್ಟಪಟ್ಟು ಮುಂದೆ ಬಂದ ಎಷ್ಟೋ ಉದ್ಯಮಿಗಳನ್ನ ನೋಡಿರುತ್ತೇವೆ. ಅಂತೆಯೇ ಅದರಲ್ಲಿ ಕೆಲವರ ಮಕ್ಕಳು, ಇದ್ದ ದುಡ್ಡನ್ನು ಉಳಿಸಿಕೊಳ್ಳಲಾಗದೇ, ಗಳಿಸಲೂ ಆಗದೇ, ಶ್ರೀಮಂತಿಕೆ ಕಳೆದುಕೊಂಡು ಬಿಡುತ್ತಾರೆ. ಯಾಕಂದ್ರೆ ಅಪ್ಪನಿಗೆ ಗೊತ್ತಿದ್ದ ಉದ್ಯಮದ ನೀತಿಶಾಸ್ತ್ರಗಳು ಮಗನಿಗೆ ಗೊತ್ತಿರುವುದಿಲ್ಲ. ಹಾಗಾಗಿ ಉದ್ಯಮಿಯಾಗುವ ಮುಂಚೆ ಹಲವು ವಿಚಾರಗಳನ್ನು ನಾವು ತಿಳಿದುಕೊಂಡಿರಬೇಕು.
ಮೊದಲನೇಯದಾಗಿ ಉದ್ಯಮ ಆರಂಭಿಸುವಾಗ ಅದರಲ್ಲಿ ಲಾಭ ಎಷ್ಟು ಬರುತ್ತದೆ ಅಂತಾ ನೋಡದೇ, ನಷ್ಟವಾದರೆ, ಆ ನಷ್ಟವನ್ನು ಕಡೆಗಣಿಸಿ, ಉದ್ಯಮವನ್ನು ಯಶಸ್ಸಿನೆಡೆಗೆ ತೆಗೆದುಕೊಂಡು ಹೋಗಬಲ್ಲೆವಾ ಅನ್ನೋ ಬಗ್ಗೆ ಯೋಚಿಸಬೇಕು. ಇದರ ಅರ್ಥವೇನೆಂದರೆ, ನಷ್ಟದ ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧವಿರಬೇಕು. ನಷ್ಟವಾಯಿತು, ಕಷ್ಟ ಬಂತೆಂದು ಕೈ ಚೆಲ್ಲಿ ಕುಳಿತರೆ, ಮುಂದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಚಾಣಕ್ಯರು.
ಎರಡನೇಯದಾಗಿ ನೀವು ಮಾಡುವ ಉದ್ಯಮದ ಬಗ್ಗೆ ಉತ್ತಮ ಜ್ಞಾನವನ್ನು ನೀವು ಹೊಂದಿರಬೇಕು. ನಿಮ್ಮ ಉದ್ಯಮದ ಬಗ್ಗೆ ನಿಮಗೆ ಜ್ಞಾನವಿಲ್ಲದಿದ್ದರೆ, ಆ ಉದ್ಯಮದಿಂದ ನೀವು ಲಾಭ ಕಾಣಲು ಸಾಧ್ಯವಿಲ್ಲ. ನಿಮಗೆ ಉದ್ಯಮದ ಬಗ್ಗೆ ಕಿಂಚಿತ್ತು ಜ್ಞಾನವಿಲ್ಲದೇ, ಜ್ಞಾನವಿರುವವರನ್ನು ನೀವು ಕೆಲಸಕ್ಕಿಟ್ಟುಕೊಂಡರೆ. ಅವರು ಅದರ ಲಾಭ ಪಡೆಯುತ್ತಾರೆ. ಅಲ್ಲಿಗೆ ನಿಮ್ಮ ಉದ್ಯಮ ಅರ್ಧಕ್ಕೆ ಮುಳಗಿದ ಹಾಗೆ.
ಮೂರನೇಯದಾಗಿ ಧೈರ್ಯತನದಿಂದ ಉದ್ಯಮವನ್ನು ನಿರ್ವಹಿಸಬೇಕು ಮತ್ತು ಆಲಸ್ಯವನ್ನು ಬಿಡಬೇಕು. ಯಾವ ವ್ಯಕ್ತಿ ಆಲಸ್ಯವನ್ನು ಬಿಟ್ಟು, ಕಷ್ಟಪಟ್ಟು ಕೆಲಸ ಮಾಡುತ್ತಾನೋ, ಆತ ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತಾನೆ. ಆಲಸ್ಯದಿಂದ, ಧೈರ್ಯವಿಲ್ಲದೇ ಉದ್ಯಮ ಆರಂಭಿಸಿದರೆ ಆ ಉದ್ಯಮಕ್ಕೆ ಎಂದಿಗೂ ಜಯ ಸಿಗುವುದಿಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




