ರಿಷಿ ಚಣಕನ ಪುತ್ರನಾಗಿ ಜನಿಸಿದ ಚಾಣಕ್ಯ, ಬುದ್ಧಿವಂತ, ಸರ್ವಪಾರಂಗತನಾಗಿದ್ದ ಚಾಣಕ್ಯ ಕೌಟಿಲ್ಯ ಮತ್ತು ವಿಷ್ಣು ಗುಪ್ತನೆಂಬ ಹೆಸರಿಂದಲೂ ಪ್ರಸಿದ್ಧಿ ಗಳಿಸಿದ. ಈಗಲೂ ಕೂಡ ಯಾರಾದ್ರೂ ತಮ್ಮ ಬುದ್ಧಿವಂತಿಕೆ ಪ್ರದರ್ಶನ ಮಾಡಿದ್ದಲ್ಲಿ ಅವನು ತುಂಬ ಚಾಣಾಕ್ಷನಿದ್ದಾನೆ ಅಥವಾ ಅವನು ಚಾಣಕ್ಯ ರೀತಿ ಬುದ್ಧಿ ಓಡಿಸುತ್ತಾನೆ ಎಂದು ಹೇಳುತ್ತಾರೆ. ಬುದ್ಧಿವಂತಿಕೆಗೆ ಅಷ್ಟು ಪ್ರಸಿದ್ಧನಾಗಿದ್ದ ಚಾಣಕ್ಯ.

ಅಂಥ ಚಾಣಕ್ಯ ಉದ್ಯಮ ಆರಂಭಿಸುವಾಗ ಅನುಸರಿಸಬೇಕಾದ ಕೆಲ ನಿಯಮಗಳನ್ನ ಕೂಡ ಹೇಳಿದ್ದಾನೆ. ಯಾವುದು ಆ ನಿಯಮ ಅನ್ನೋದನ್ನ ಇವತ್ತು ನಾವು ತಿಳಿಯೋಣ.
ಮೊದಲನೆಯದಾಗಿ ಉದ್ಯಮ ಶುರು ಮಾಡುವುದಕ್ಕೂ ಮುನ್ನ ನೀವು ನಿಮ್ಮಲ್ಲಿ 3 ಪ್ರಶ್ನೆಗಳನ್ನ ಕೇಳಿಕೊಳ್ಳಬೇಕಾಗುತ್ತದೆ.
ನಾನು ಯಾವ ರೀತಿಯ ಉದ್ಯಮ ಶುರು ಮಾಡಬೇಕು..?
ಈ ಉದ್ಯಮ ಶುರು ಮಾಡಿದ್ರೆ ನನಗೇನು ಸಿಗುತ್ತೆ..?
ಈ ಉದ್ಯಮ ಆರಂಭಿಸಿದ ಮೇಲೆ ನನಗೆ ಬರುವ ಕಷ್ಟಗಳನ್ನ ನಾನು ಎದುರಿಸಬಲ್ಲೆನಾ..? ಎಂಬ ಪ್ರಶ್ನೆಯನ್ನ ನಿಮ್ಮಲ್ಲಿ ನೀವು ಕೇಳಿಕೊಳ್ಳಬೇಕಾಗುತ್ತದೆ.
ನೀವು ಉದ್ಯಮ ಶುರುಮಾಡುವಾಗ ಸಕಾರಾತ್ಮಕ ಯೋಚನೆ ಮತ್ತು ಸ್ಥಿರ ಮನಸ್ಸಿರುವುದು ಮುಖ್ಯವಾಗುತ್ತದೆ. ನಕಾರಾತ್ಮಕ ಯೋಚನೆ ಮತ್ತು ಅಸ್ಥಿರ ಮನಸ್ಸಿದ್ದಲ್ಲಿ ಉದ್ಯಮದಲ್ಲಿ ಸಫಲರಾಗಲು ಸಾಧ್ಯವಿಲ್ಲ.
ಬಹುಮುಖ್ಯವಾಗಿ ನಿಮ್ಮ ಉದ್ಯಮದ ಸಿಕ್ರೇಟ್ಸ್ನ್ನ ನೀವು ಯಾರೊಂದಿಗೂ ಹಂಚಿಕೊಳ್ಳಬಾರದು. ಹೀಗೆ ಮಾಡುವುದರಿಂದ ನಿಮ್ಮ ಉದ್ಯಮದ ಮೇಲೆ ಇದರ ಪರಿಣಾಮ ಉಂಟಾಗುತ್ತದೆ. ನಷ್ಟ ಕಂಡರೂ ಕಾಣಬಹುದು. ಆದ್ದರಿಂದ ಯಾವುದೇ ಕೆಲಸ ಮಾಡುವ ಮೊದಲು ಅದರ ಬಗ್ಗೆ ತಮಟೆ ಹೊಡಿಯಬಾರದು.
ಇನ್ನು ನಿಮ್ಮ ಉದ್ಯಮಕ್ಕೆ ಸಬಂಧಪಟ್ಟಂತೆ ನಿಮ್ಮ ಜೀವನ ಸಂಗಾತಿಯ ಬಳಿ ಸಲಹೆ ಕೇಳಿ.
ಉದ್ಯಮ ಶುರು ಮಾಡುವಾಗ ಎಲ್ಲಿ ಯಾವಾಗ ಮಾಡಬೇಕು ಮತ್ತು ಅಲ್ಲಿನ ಜನರು ಹೇಗೆ ಅನ್ನೋದನ್ನ ಮೊದಲು ತಿಳಿದುಕೊಂಡಿರಬೇಕು.
ಉದ್ಯಮ ಶುರು ಮಾಡುವುದಕ್ಕೂ ಮೊದಲು ನಿಮ್ಮ ಕಷ್ಟಕಾಲದಲ್ಲಿ ಸಹಾಯಕ್ಕೆ ಯಾರು ಬರುತ್ತಾರೆ. ನಿಮಗೆ ಯಾರು ಆರ್ಥಿಕ ಸಹಾಯ ಮಾಡಬಲ್ಲರು, ನಿಮ್ಮ ಬೆನ್ನೆಲುಬಾಗಿ ಯಾರು ನಿಲ್ಲಬಲ್ಲರು ಎಂಬುದನ್ನ ತಿಳಿದುಕೊಂಡಿರಬೇಕು.
ಉದ್ಯಮ ಶುರು ಮಾಡುವವರು ಮುಖ್ಯವಾಗಿ ತಿಳಿದಿರಬೇಕಾದ ವಿಷಯ ಅಂದ್ರೆ, ನಿಮ್ಮ ಮಾತಿನ ಮೇಲೆ ಹಿಡಿತವಿರಬೇಕು. ನಿಮ್ಮ ಮಾತು ಯಾವಾಗಲೂ ಹಿತ ಮಿತವಾಗಿದ್ದು, ಎದುರಿನವರಿಗೆ ಇಷ್ಟವಾಗುವಂತಿರಬೇಕು. ಉದ್ಯಮದಲ್ಲಿ ಲಾಭ ಹೆಚ್ಚಾದಂತೆ ನಿಮ್ಮ ಮಾತಿನ ಹಿಡಿತ ತಪ್ಪಬಹುದು, ಕೆಲಸದ ಒತ್ತಡದಿಂದ ಸಿಟ್ಟಿನ ಮಾತುಗಳನ್ನಾಡಲುಬಹುದು. ಇಂತಹ ಮಾತು ನೀವು ಹಲವು ದಿನಗಳಿಂದ ಗಳಿಸಿಕೊಂಡು ಬಂದ ಲಾಭವನ್ನ ಕೆಲ ದಿನಗಳಲ್ಲೇ ನಾಶಪಡಿಸುವ ಶಕ್ತಿ ಹೊಂದಿರುತ್ತದೆ.
ಯಾವ ಮರ ನೆಟ್ಟಗಿರುತ್ತದೆಯೋ ಅಂಥ ಮರವನ್ನ ಮೊದಲು ಕತ್ತರಿಸಲಾಗುತ್ತದೆ. ಆದ್ದರಿಂದ ಉದ್ಯಮ ನಡೆಸುವಾಗ ತುಂಬಾ ಒಳ್ಳೆಯವರಾಗಬೇಡಿ. ಒಳ್ಳೆಯವರಿಗೆ ಒಳ್ಳೆಯವರು ಕೆಟ್ಟವರಿಗೆ ಕೆಟ್ಟವರು ಎಂಬಂತಿರಿ. ಇಲ್ಲದಿದ್ದರೆ ನಿಮ್ಮ ಒಳ್ಳೆಯತನದ ಲಾಭವನ್ನ ಜನ ತುಂಬಾ ಈಸಿಯಾಗಿ ತೆಗೆದುಕೊಳ್ಳುತ್ತಾರೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




