ನಾವು ನಿಮಗೆ ಈಗಾಗಲೇ ಚಾಣಕ್ಯ ನೀತಿಯ ಬಗ್ಗೆ ಹಲವು ಮಾಹಿತಿಯನ್ನ ನೀಡಿದ್ದೇವೆ. ಜೀವನ ಪಾಠ ಹೇಳುವ ಚಾಣಕ್ಯರು ದುಡಿಯುವಾಗ ಮಾಡಬಾರದ ನಾಲ್ಕು ಕೆಲಸಗಳ ಬಗ್ಗೆಯೂ ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೊದಲನೇಯದಾಗಿ ನೀವು ಹಣ ಸಂಪಾದನೆ ಮಾಡುವಾಗ ಅಂದ್ರೆ ದುಡಿಯುವಾಗ ಯಾವುದೇ ಜಂಬ ತೋರಿಸಬಾರದು. ನಾನು ತಿಂಗಳಿಗೆ ಇಷ್ಟು ದುಡಿಯುತ್ತೇನೆಂದು ಯಾರ ಎದುರೂ ಕೊಚ್ಚಿಕೊಳ್ಳಬಾರದು. ಯಾಕಂದ್ರೆ ಯಾರೂ ಜಂಬ ತೋರಿಸುತ್ತಾರೋ, ಅವರ ವೈಭವ ಬಹುಬೇಗ ಮುಗಿದು ಹೋಗುತ್ತದೆ. ಅಲ್ಲದೇ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗುತ್ತೀರಿ. ಹಾಗಾಗಿ ಯಾವ ವಿಷಯದಲ್ಲೂ ಜಂಬ ಕೊಚ್ಚಿಕೊಳ್ಳುವುದು ಉತ್ತಮವಲ್ಲ.
ಎರಡನೇಯದಾಗಿ ನಿಮ್ಮ ಸಂಬಳದ ಬಗ್ಗೆ ಹಣದ ವ್ಯವಹಾರದ ಬಗ್ಗೆ ಯಾರೊಂದಿಗೂ ಚರ್ಚಿಸಬೇಡಿ. ಯಾಕಂದ್ರೆ ಎಲ್ಲರೂ ನಿಮ್ಮ ಹಿತವನ್ನೇ ಬಯಸುವುದಿಲ್ಲ. ಅಸೂಯೆ ಪಡುತ್ತಾರೆ. ಅಥವಾ ನೀವು ಸಂಪಾದಿಸುತ್ತಿರುವ ಹಣದ ಮೇಲೆ ಕಣ್ಣು ಹಾಕುತ್ತಾರೆ. ಹಾಗಾಗಿ ಹಣದ ಬಗ್ಗೆ ಯಾರ ಬಳಿಯೂ ಹೇಳಬೇಡಿ.
ಮೂರನೇಯದಾಗಿ ಬೇರೆಯವರಿಗೆ ಮೋಸ ಮಾಡಿ, ಹಿಂಸೆ ನೀಡಿ, ಯಾಮಾರಿಸಿ ಯಾರು ಹಣ ಗಳಿಸುತ್ತಾರೋ, ಅಂಥ ಹಣ ಎಂದಿಗೂ ನಿಮ್ಮ ಬಳಿ ನಿಲ್ಲುವುದಿಲ್ಲ. ಅಲ್ಲದೇ ಮೋಸ ಹೋದವರ ಶಾಪ ಕೂಡ ನಿಮಗೆ ತಟ್ಟದೇ ಬಿಡುವುದಿಲ್ಲ. ಹಾಗಾಗಿ ಯಾರಿಗೂ ಮೋಸ ಮಾಡದೇ, ನಿಯತ್ತಾಗಿ ದುಡಿದು ಹಣ ಗಳಿಸಿದರೆ ಉತ್ತಮ.
ನಾಲ್ಕನೇಯದಾಗಿ ಖರ್ಚು ವೆಚ್ಚ ಕಡಿಮೆ ಮಾಡಬೇಕು. ದುಡ್ಡು ಇದೆ ಎಂದು ಬೇಕಾದ ಹಾಗೆ ಖರ್ಚು ಮಾಡಿದರೆ, ಹಣದ ಅವಶ್ಯಕತೆ ಇದ್ದ ಸಮಯದಲ್ಲಿ ಕಷ್ಟಪಡಬೇಕಾಗುತ್ತದೆ. ಕಷ್ಟ ಹೇಳಿ ಕೇಳಿ ಬರುವುದಿಲ್ಲ. ಹಾಗಾಗಿ ಉಳಿತಾಯ ಮಾಡುವುದು ತುಂಬಾ ಮುಖ್ಯವಾಗಿದೆ. ಹಾಗೆಂದು ಯಾವುದಕ್ಕೂ ಹಣ ಖರ್ಚು ಮಾಡದೇ ದುಡ್ಡು ಕೂಡಿಡಬೇಕು ಅಂತಲ್ಲ. ಅವಶ್ಯಕತೆ ಇದ್ದದಕ್ಕೆ ಮಾತ್ರ ಖರ್ಚು ಮಾಡಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




