Saturday, July 5, 2025

Latest Posts

Chanakya Neeti: ಇಂಥವರನ್ನು ಎಂದಿಗೂ ಹತ್ತಿರ ಸೇರಿಸಬೇಡಿ ಎಂದಿದ್ದಾರೆ ಚಾಣಕ್ಯರು

- Advertisement -

Chanakya Neeti: ಚಾಣಕ್ಯರು ಜೀವನ ಮಾಡಲು, ಸಂಸಾರ ಸಾಗಿಸಲು, ಆರ್ಥಿಕವಾಗಿ ಸಬಲರಾಗಲು ಏನು ಮಾಡಬೇಕು ಎಂದು ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ನಾವು ನೆಮ್ಮದಿಯಾಗಿ ಇರಬೇಕು ಅಂದ್ರೆ, ನಮ್ಮ ಜೀವನದಲ್ಲಿ ಕೆಲವರು ಹತ್ತಿರಕ್ಕೂ ಸೇರಿಸಬಾರದಂತೆ. ಹಾಗಾದ್ರೆ ಎಂಥವರನ್ನು ನಾವು ಹತ್ತಿರಕ್ಕೆ ಸೇರಿಸಬಾರದು ಅಂತಾ ತಿಳಿಯೋಣ ಬನ್ನಿ.

ಜೀವನ ಸಂಗಾತಿಯ ಆಯ್ಕೆ ಮಾಡುವಾಗ ಎಚ್ಚರದಿಂದಿರಿ: ಮದುವೆ ಅಂದರೆ, ಜೀವನದ ಮಹತ್ವದ ಸಮಯ. ಈ ಸಮಯವೇ ನಮ್ಮ ಮುಂದಿನ ಜೀವನದ ಸುಖ ದುಃಖ, ಖುಷಿ, ನಗು- ಅಳು ಎಲ್ಲವನ್ನೂ ನಿಶ್ಚಯಿಸುತ್ತದೆ. ಹಾಗಾಗಿ ನಾವು ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ, ಎಚ್ಚರಿಕೆಯಿಂದಿರಬೇಕು. ಆ ವ್ಯಕ್ತಿಯ ಗುಣ ಉತ್ತಮವಾಗಿರಬೇಕು. ಜವಾಬ್ದಾರಿಯುತವಾಗಿರಬೇಕು. ಆಗ ಮಾತ್ರ ನಮ್ಮ ಜೀವನ ಉತ್ತಮವಾಗಿರಲು ಸಾಧ್ಯ. ಇಲ್ಲದಿದ್ದಲ್ಲಿ, ಪ್ರತಿದಿನ ಕಣ್ಣೀರೇ ಜೀವನವಾಗಬಹುದು.

ಎಂಥವರಿಗಾದರೂ ಬುದ್ಧಿ ಹೇಳುವ ಮುನ್ನ ಎಚ್ಚರದಿಂದಿರಿ: ನಾವು ಯಾರಿಗಾದರೂ ಬುದ್ಧಿ ಹೇಳುವಾಗ, ಏನನ್ನಾದರೂ ಅರ್ಥ ಮಾಡಿಸುವಾಗ, ಶಿಕ್ಷಕರಾಗಿದ್ದಲ್ಲಿ ಪಾಠ ಮಾಡುವಾಗ, ನಿಮ್ಮ ಸಮಯ ವ್ಯರ್ಥವಾಗುತ್ತಿಲ್ಲವೆಂಬುದನ್ನು ಅರಿತುಕ“ಳ್ಳಿ. ಏಕೆಂದರೆ, ಈ ಎಲ್ಲವನ್ನೂ ಕೇಳಿಸಿಕ“ಳ್ಳುವವರು ಮೂರ್ಖರಾಗಿದ್ದಲ್ಲಿ, ಅವರೇ ಬುದ್ಧಿವಂತರು ಎಂದೇ ಅವರು ವಾದಿಸುತ್ತಾರೆ. ಅಲ್ಲಿಗೆ ನಿಮ್ಮ ಸಮಯ ಹಾಳಾಗುತ್ತದೆ. ಹಾಗಾಗಿ ಇಂಥವರನ್ನು ನಿಮ್ಮ ಜೀವನದಿಂದ ತೆಗೆದು ಹಾಕುವುದು ಉತ್ತಮ.

ರೋಗ ಪೀಡಿತ ವ್ಯಕ್ತಿಯಿಂದ ದೂರವಿರಿ: ರೋಗವಿರುವವರು ಸದಾಕಾಲ ನಕಾರಾತ್ಮಕವಾಗಿಯೇ ಯೋಚಿಸುತ್ತಾರೆ. ಅವರ ಜತೆ ಇರುವವರ ನೆಮ್ಮದಿಯನ್ನೂ ಹಾಳು ಮಾಡುತ್ತಾರೆ. ಇಂಥವರ ಜತೆ ಅಂತರ ಕಾಯ್ದುಕ“ಳ್ಳುವುದು ಉತ್ತಮ. ಇವರಲ್ಲದೇ, ದ್ವೇಷ, ಅಸೂಯೆ ಮನೋಭಾವನೆ ಇರುವವರಿಂದ ಕೂಡ ನಾವು ದೂರವಿರಬೇಕು ಅಂತಾರೆ ಚಾಣಕ್ಯರು.

- Advertisement -

Latest Posts

Don't Miss