Friday, July 11, 2025

Latest Posts

ಈ 7 ಅಭ್ಯಾಸ ನಿಮ್ಮಲ್ಲಿದ್ದಲ್ಲಿ ನೀವೇ ಯಶಸ್ವಿ ಅನ್ನುತ್ತಾರೆ ಚಾಣಕ್ಯರು

- Advertisement -

Spiritual: ಚಾಣಕ್ಯರು ಜೀವನದಲ್ಲಿ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದಾರೆ. ತಮ್ಮ ಚಾಣಕ್ಯ ನೀತಿಯಲ್ಲಿ, ಮನುಷ್ಯನ ಯಶಸ್ಸಿನ ಬಗ್ಗೆ ಮಾತನಾಡಿರುವ ಅವರು, ಮನುಷ್ಯ ಯಶಸ್ವಿಯಾಗಲು ಅವನಲ್ಲಿ ಕೆಲವು ಗುಣಗಳಿರಬೇಕು ಎಂದಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.

ಒಳ್ಳೆಯ ಮಾತು : ನೀವು ಆಡುವ ಮಾತು, ನಿಮ್ಮ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ. ಮತ್ತು ಗೌರವವನ್ನು ತಗ್ಗಿಸುತ್ತದೆ. ಹಾಗಾಗಿ ನೀವು ಎಲ್ಲರ ಬಳಿ ಸೌಮ್ಯವಾಗಿ ಮಾತನಾಡಿದರೆ, ಅಥವಾ ಗಾಂಭೀರ್ಯದಿಂದ, ಧೈರ್ಯದಿಂದ ಮಾತನಾಡಿದರೆ, ಅದು ನಿಮ್ಮ ಗೌರವನ್ನು ಹೆಚ್ಚಿಸುತ್ತದೆ. ಮತ್ತು ವ್ಯಂಗ್ಯವಾದ ಮಾತು ನಿಮ್ಮ ಮೇಲಿನ ಗೌರವವನ್ನು ತಗ್ಗಿಸುತ್ತದೆ. ಮತ್ತು ಹೀಗೆ ವ್ಯಂಗ್ಯವಾಗಿ, ಇನ್ನೊಬ್ಬರ ಮನಸ್ಸನ್ನು ನೋಯಿಸಿ, ಮಾತನಾಡುವವರಿಗೆ ಯಾರೂ ಕೂಡ ಪ್ರೀತಿ, ಕಾಳಜಿ, ಗೌರವ ಏನನ್ನೂ ನೀಡುವುದಿಲ್ಲ.

ಮಾಡುವ ಕೆಲಸ ಯಾರಿಗೂ ಹೇಳದೇ ಇರುವುದು : ನೀವು ಯಾವುದಾದರೊಂದು ಕೆಲಸ ಮಾಡಲು ಶುರು ಮಾಡಿದ್ದೀರಿ. ಅದರಿಂದ ನಿಮಗೆ ದುಡ್ಡು, ಪ್ರಸಿದ್ಧ ಎಲ್ಲವೂ ಸಿಗಬಹುದಾಗಿದ್ದರೆ, ಆ ಕೆಲಸದಲ್ಲಿ ಲಾಭ ಬರುವ ಮುನ್ನವೇ ಅದರ ಬಗ್ಗೆ ಇನ್ನೊಬ್ಬರ ಬಳಿ ಹೇಳಬೇಡಿ. ಅದರಲ್ಲಿ ನೀವು ಸಕ್ಸಸ್ ಆದ ಬಳಿಕವೇ, ಅವರಿಗೆ ನೀವು ಮಾಡಿದ ಕೆಲಸದ ಬಗ್ಗೆ ಗೊತ್ತಾಗಬೇಕು.

ವಯಸ್ಸಾದರೂ ಇನ್ನೂ ಕಲಿಯುವ ಉತ್ಸಾಹ : ಕಲಿಯುವ, ಶಾಲೆ, ಕಾಲೇಜಿಗೆ ಹೋಗುವ ಸಮಯ ಮೀರಿ ಹೋಗಿದ್ದರೂ ಕೂಡ, ನೀವು ಜೀವನದಲ್ಲಿ ತಿಳಿದುಕೊಳ್ಳುವ, ಕಲಿಯುವ ವಿಷಯ ಬೇಕಾದಷ್ಟಿರುತ್ತದೆ. ಅಂಥ ವಿಷಯವನ್ನು ಕಕಲಿತುಕೊಳ್ಳುವ ಉತ್ಸಾಹ ನಿಮ್ಮಲ್ಲಿ ಎಲ್ಲಿಯವರೆಗೂ ಇರುತ್ತದೆಯೋ, ಅಲ್ಲಿಯವರೆಗೂ ನೀವು ಪರ್ಫೆಕ್ಟ್ ವ್ಯಕ್ತಿ ಎನ್ನಿಸಿಕೊಳ್ಳುತ್ತೀರಿ.

ಹಣ ಬಳಸುವ ಬುದ್ಧಿ: ಹಣವನ್ನು ಹೇಗೆ ಬಳಸಬೇಕು. ಎಷ್ಟು ಖರ್ಚು ಮಾಡಬೇಕು. ಯಾವ ರೀತಿ ಹಣವನ್ನು ಬಳಸಬೇಕು. ಹಣ ಹೇಗೆ ಕೂಡಿಡಬೇಕು. ಯಾವುದರಲ್ಲಿ ಹಣವನ್ನು ಇನ್ವೆಸ್ಟ್ ಮಾಡಬೇಕು ಅನ್ನೋ ಬಗ್ಗೆ ಓರ್ವ ವ್ಯಕ್ತಿಗೆ ಚೆನ್ನಾಗಿ ಗೊತ್ತಿರಬೇಕು. ಆಗಲೇ ಆತ ಯಶಸ್ವಿಯಾಗಲು ಸಾಧ್ಯ.

ಸಂಬಂಧ ನಿಭಾಯಿಸುವ ಬುದ್ಧಿ: ಓರ್ವ ವ್ಯಕ್ತಿಗೆ ಸಮಾಜದಲ್ಲಿ ಗೌರವ, ಹಣ, ನೆಮ್ಮದಿ, ಐಷಾರಾಮಿ ಜೀವನ ಎಲ್ಲವೂ ಎಷ್ಟು ಮುಖ್ಯವೋ, ಮನೆಯಲ್ಲಿನ ಸಂಬಂಧವೂ ಅಷ್ಟೇ ಮುಖ್ಯ. ನೀವು ಸಮಾಜದಲ್ಲಿ ಗೌರವ, ಹಣ ಸಂಪಾದಿಸಿದರೂ ಕೂಡ, ಮನೆಯಲ್ಲಿನ ಸಂಬಂಧಗಳು ಸರಿಯಾಗಿ ನಿಭಾಯಿಸಿಲ್ಲವೆಂದಲ್ಲಿ ನಿಮಗೆ ಯಶಸ್ಸು, ನೆಮ್ಮದಿ ಸಿಗಲು ಸಾಧ್ಯವೇ ಇಲ್ಲ.

ಕಷ್ಟಪಡುವ ಬುದ್ಧಿ: ಯಾರಿಗೆ ಕಷ್ಟಪಡದೇ ಹಾಗೆ ಸುಖ ಸಿಗಬೇಕು ಎನ್ನುವ ಬುದ್ಧಿ ಇರುತ್ತದೆಯೋ, ಅಂಥವರಿಗೆ ಎಂದಿಗೂ ಸುಖವಾಗಿರುವ ಯೋಗ ಕೂಡಿ ಬರುವುದಿಲ್ಲ. ಹಾಗಾಗಿಯೇ ಕಷ್ಟಪಟ್ಟು ದುಡಿಯಬೇಕು ಅಂತಾ ಹೇಳೋದು. ಕಷ್ಟ ಪಟ್ಟಷ್ಟು ನಮಗೆ ಸಿಗುವ ಫಲ ಸಿಹಿಯಾಗಿರುತ್ತದೆ.

ದಿನ ನಿರ್ವಹಿಸುವ ಬುದ್ಧಿ: ದಿನ ನಿರ್ವಹಿಸುವುದು ಎಂದರೆ, ಯಾವ ದಿನ ಯಾವ ಕೆಲಸ ಪೂರ್ಣಗೊಳಿಸಬೇಕೋ, ಅದನ್ನು ಅಂದೇ ಪೂರ್ಣಗೊಳಿಸುವ ಬುದ್ಧಿ. ಅಂದರೆ, ಕೆಲಸವನ್ನೂ ಮುಂದೂಡದೇ, ಅಂದಿನ ಕೆಲಸವನ್ನು ಅಂದಿನ ರಾತ್ರಿಯೊಳಗೆ ಮಾಡುವ ಬುದ್ಧಿ. ಅಂದರೆ, ಬೆಳಿಗ್ಗೆ ಬೇಗ ಎದ್ದು, ಕೆಲಸ ಶುರು ಮಾಡುವವರು ಸದಾ ಯಶಸ್ವಿಯಾಗಿರುತ್ತಾರೆ.

- Advertisement -

Latest Posts

Don't Miss