Friday, August 29, 2025

Latest Posts

ಇಂಥ ಗುಣಗಳಿರುವ ಹೆಣ್ಣು ಸಿಕ್ಕರೆ, ಆ ಪುರುಷನಿಗಿಂತ ಅದೃಷ್ಟವಂತ ಮತ್ತೊಬ್ಬನಿಲ್ಲ..!

- Advertisement -

ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿಸಲು ತನ್ನ ಚಾಣಾಕ್ಷ ತನವನ್ನ ಬಳಸಿದ ಚಾಣಕ್ಯ, ಕೊನೆಗೂ ಚಂದ್ರಗುಪ್ತ ಮೌರ್ಯನನ್ನು ರಾಜಗದ್ದುಗೆಯ ಮೇಲೆ ಕೂರಿಸಿಯೇ ಬಿಟ್ಟ. ತಾನಿರುವ ತನಕ ಮೌರ್ಯ ಸಾಮ್ರಾಜ್ಯಕ್ಕೆ ಕಿಂಚಿತ್ತು ಧಕ್ಕೆ ಬರದ ರೀತಿ ನೋಡಿಕೊಂಡ ಚಾಣಕ್ಯ, ಬುದ್ಧಿವಂತರಲ್ಲೇ ಅತೀ ಬುದ್ಧಿವಂತ ಎನ್ನಿಸಿಕೊಂಡವ.

ಇಂಥ ಚಾಣಕ್ಯ ಹೆಣ್ಣಿನ ಗುಣಗಳ ಬಗ್ಗೆ ಒಂದಷ್ಟು ಮಾತು ಹೇಳಿದ್ದಾನೆ. ಅಲ್ಲದೇ, ಅಂಥ ಹೆಣ್ಣು ಯಾರಿಗಾದರೂ ಸಿಕ್ಕರೆ ಅವರಷ್ಟು ಅದೃಷ್ಟವಂತರು ಇನ್ಯಾರಿಲ್ಲ ಅಂತಲೂ ಹೇಳಿದ್ದಾನೆ. ಹಾಗಾದ್ರೆ ಹೆಣ್ಣಿಗಿರಬೇಕಾದ ಆ ಮಹತ್ವದ ಗುಣಗಳು ಯಾವುದು. ಯಾವ ಗುಣವಿರುವ ಹೆಣ್ಣನ್ನ ಪುರುಷ ವಿವಾಹವಾಗಬೇಕು ಅನ್ನೋದನ್ನ ತಿಳಿಯೋಣ ಬನ್ನಿ.

ಹೆಣ್ಣಿಗೆ ಹೇಗೆ ತನ್ನನ್ನು ಮದುವೆಯಾಗುವ ಹುಡುಗ ಹೇಗಿರುತ್ತಾನೋ, ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೋ ಇಲ್ಲವೋ.? ತಾನು ಗಂಡನ ಮನೆಯಲ್ಲಿ ಹೇಗಿರಬೇಕೋ ಏನೋ ಎಂಬ ಚಿಂತೆ ಇರುತ್ತದೆಯೋ, ಅಂತೆಯೇ ಗಂಡಿಗೂ ಕೂಡ, ತನ್ನನ್ನು ಮದುವೆಯಾಗುವ ಹುಡುಗಿ, ಹೇಗಿರುತ್ತಾಳೋ, ತನ್ನ ಮನೆಗೆ ಹೊಂದಿಕೊಂಡು ಹೋಗುತ್ತಾಳೋ ಇಲ್ಲವೋ, ತನಗೆ ಉತ್ತಮ ಸತಿಯಾಗುತ್ತಾಳಾ ಎಂಬ ಚಿಂತೆ ಇರುತ್ತದೆ.

ಚಾಣಕ್ಯನ ಪ್ರಕಾರ, ಹೆಣ್ಣು ಅನಕ್ಷರಸ್ಥಳೂ, ಕೆಲಸಕ್ಕೆ ಹೋಗದಿದ್ದರೂ ಆಕೆಗೆ ಸಂಸಾರದ ಬಗ್ಗೆ ಸಮಾಜದ ಬಗ್ಗೆ ತಿಳುವಳಿಕೆ ಇರುತ್ತದೋ, ಅಂಥವಳು ಉತ್ತಮ ಪತ್ನಿಯಾಗಬಲ್ಲಳು.

ಕಂಡಕಂಡದ್ದೆಲ್ಲಾ ಕೊಂಡು ದುಡ್ಡು ಹಾಳು ಮಾಡುವ ಬದಲು, ಉಳಿತಾಯ ಮಾಡುವ ಹೆಣ್ಣು, ಗಂಡನ ಕಷ್ಟಕಾಲಕ್ಕೆ ಸಹಾಯವಾಗುವಳು. ಇಂಥ ಹೆಣ್ಣಿನೊಂದಿಗೆ ವಿವಾಹವಾದರೆ ಜೀವನ ಸುಖಮಯವಾಗಿರುತ್ತದೆ.
ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೀತಿ ಕೊಡುವ ಹೆಣ್ಣು, ಸಂಸಾರವನ್ನೂ ಚೆನ್ನಾಗಿ ನಿಭಾಯಿಸಿಕೊಂಡು ಹೋಗಬಲ್ಲಳು ಎಂದು ಚಾಣಕ್ಯ ನೀತಿ ಹೇಳುತ್ತದೆ.

ಸಿರಿತನದಲ್ಲಷ್ಟೇ ಅಲ್ಲದೇ, ಗಂಡನ ಕಷ್ಟಕಾಲದಲ್ಲಿ ಯಾವ ಹೆಣ್ಣು ಗಂಡನಿಗೆ ಸಾಥ್ ನೀಡಿ, ಸಲಹೆ ಕೊಡುತ್ತಾಳೋ, ಅಂಥ ಹೆಣ್ಣನ್ನು ಮದುವೆಯಾದರೆ ಪುರುಷನ ಅಭಿವೃದ್ಧಿ ಖಚಿತವಾಗುವುದು.

ಅಲ್ಲದೇ, ಸಂಸ್ಕೃತಿ ಮತ್ತು ಪರಂಪರೆಯ ಪಾಲನೆ ಮಾಡುವ ಹೆಣ್ಣು, ಸಂಬಂಧಕ್ಕೆ ಬೆಲೆ ಕೊಡುವ ಹೆಣ್ಣು ವಿವಾಹಕ್ಕೆ ಶ್ರೇಷ್ಟಳಂತೆ.

ಮನೆಯ ಮಾನ ಮರ್ಯಾದೆ ಅರಿತು, ದುರಹಂಕಾರ ತೋರದೇ ಇರುವ ಹೆಣ್ಣು, ಉತ್ತಮ ಪತ್ನಿಯಾಗಬಲ್ಲಳು.

- Advertisement -

Latest Posts

Don't Miss