Special pooja: ಚಂದ್ರಯಾನ ಯಶಸ್ಸಿಗಾಗಿ ಸಿದ್ದಾರೂಢ ಸ್ವಾಮೀಜಿ ರುದ್ರಾಭಿಷೇಕ

ಹುಬ್ಬಳ್ಳಿ: ಭಾರತದ ಈ ಕಾರ್ಯವನ್ನು  ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ಪ್ರಮುಖ ಸಾಧನೆಯತ್ತ ಸಾಗುತ್ತಿರುವ  ಚಂದ್ರಯಾನ 3  ಸುರಕ್ಷಿತವಾಗಿ ಇಳಿದು ಹಲವು ವರ್ಷಗಳ ಭಾರತೀಯ ವಿಜ್ಞಾನಿಗಳ ಕನಸು ನನಸಾಗಲಿ ಮತ್ತು ಪರಿಶ್ರಮಕ್ಕೆ ಫಲ ಸಿಗಲೆಂದು  ದೇಶದೆಲ್ಲಡೆ ಮಂದಿರ, ಮಸೀದಿ,ಚರ್ಚುಗಳಲ್ಲಿ ಸಾಕಷ್ಟು ಜನರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ.

ಅದೇ ರೀತಿ ಚಂದ್ರಯಾನ ಯಶಸ್ವಿಯಾಗಲೆಂದು ಸಿದ್ದಾರೂಢಾ ಮೂರ್ತಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮತ್ತು ಭಕ್ತರಿಂದ  ರುದ್ರಾಭಿಷೇಕ ಮತ್ತು ವಿಶೇಷವಾಗಿ ಪೂಜೆಯನ್ನು  ಸಲ್ಲಿಸುತ್ತಿದ್ದಾರೆ.

ಪೂಜೆ ವೇಳೆ ಚಂದ್ರಯಾನದ ರಾಕೇಟ್ ಭಾವಚಿತ್ರ ಮತ್ತು ಭಾರತದ ಧ್ವಜ ಹಿಡಿದು ಮಂತ್ರಗಳನ್ನು ಘೋಷಿಸಿದರು. ಭಾರತೀಯರ ಕನಸು ನನಸಾಗಲೆಂದು ಮತ್ತು ಲ್ಯಾಂಡರ್ ಸುರಕ್ಷಿತವಾಗಿ ಇಳಿಯಲೆಂದು ಭಕ್ತರು ಪ್ರಾರ್ಥಿಸಿದರು.

Chandrayana-3: ಚಂದ್ರಯಾನದ ಯಶಸ್ವಿಗಾಗಿ ಕೋಲಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ಸಂಸದ ಮುನಿಸ್ವಾಮಿ..!

Cyber Crime: ಚೋರರ ಕರಾಮತ್ತಿಗೆ ಬೆಚ್ಚಿದ ಹುಬ್ಬಳ್ಳಿ ಜನತೆ

Cattle: ದನದ ಹಟ್ಟಿಯಲ್ಲಿ ಬೆಂಕಿ ಅವಘಡ : ಏಳು ಜಾನುವಾರುಗಳು ಸಜೀವ ದಹನ….

 

About The Author