Friday, November 21, 2025

Latest Posts

ರೇಷನ್ ಕಾರ್ಡ್‌ನಲ್ಲಿ ಬದಲಾವಣೆ – ಸಚಿವ ಮುನಿಯಪ್ಪ ಘೋಷಣೆ

- Advertisement -

ಮುಂದಿನ ವರ್ಷ ಫೆಬ್ರವರಿಯಲ್ಲಿ ‘ಇಂದಿರಾ ಕಿಟ್’ ಯೋಜನೆ ಜಾರಿಗೆ ಬರಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ. ಜೋಳದ ಖರೀದಿ ಬೆಲೆ ಹಾಗೂ ಹೊಸ ಪಿಡಿಎಸ್ ಯೋಜನೆ ಸಂಬಂಧಿಸಿದಂತೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ‘ಇಂದಿರಾ ಗಾಂಧಿ’ ಹೆಸರಿನ ಹೊಸ ರೇಷನ್ ಕಿಟ್ ಪರಿಚಯಿಸಲಾಗುವುದು ಎಂದು ಅವರು ತಿಳಿಸಿದರು. ಬೇಳೆ, ಎಣ್ಣೆ, ಉಪ್ಪು ಮತ್ತು ಸಕ್ಕರೆ ಈ ಕಿಟ್‌ನಲ್ಲಿ ಇರಲಿದ್ದು, ಪೋಷಕಾಂಶಯುಕ್ತ ಆಹಾರವನ್ನು ಒದಗಿಸುವ ಉದ್ದೇಶ ಇದಾಗಿದೆ ಎಂದು ಸಚಿವರು ವಿವರಿಸಿದರು.

ಉತ್ತರ ಕರ್ನಾಟಕದ ಜನರು ಅಕ್ಕಿಗಿಂತ ಜೋಳವನ್ನು ಹೆಚ್ಚು ಬಳಸುವುದನ್ನು ಉಲ್ಲೇಖಿಸಿದ ಮುನಿಯಪ್ಪ, ಪಿಡಿಎಸ್‌ಗೆ ಅಗತ್ಯ ಮಟ್ಟದ ಜೋಳ ಲಭ್ಯವಾಗದಿರುವುದು ಚಿಂತಾಜನಕ ಎಂದು ಹೇಳಿದರು. ವಿಶೇಷವಾಗಿ ‘ಮಾಲ್ದಂಡ್ಯ’ ಜಾತಿಯ ಜೋಳದ ಕುರಿತು ಮಾತನಾಡಿದ ಅವರು, ಪ್ರಸ್ತುತ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕ್ವಿಂಟಲ್‌ಗೆ ₹1000 ರಿಂದ ₹1500 ಕಡಿಮೆಯಾಗಿದೆ ಎಂದು ಸೂಚಿಸಿದರು.

ಬೆಲೆ ಹೆಚ್ಚಿಸಿದರೆ ರೈತರು ಸರ್ಕಾರಕ್ಕೆ ಸರಬರಾಜು ಮಾಡಲು ಪ್ರೋತ್ಸಾಹಿತರಾಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಈ ವಿಷಯವಾಗಿ ಮುಖ್ಯಮಂತ್ರಿ ಮತ್ತು ಉತ್ತರ ಕರ್ನಾಟಕದ ಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾಗಿ ಹೇಳಿದರು. ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸಿ ಬೆಲೆ ನಿಗಧೀಕರಣ ಸಮಿತಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಇಂದಿರಾ ಕಿಟ್’ ಯೋಜನೆಗಾಗಿ ಟೆಂಡರ್ ಪ್ರಕ್ರಿಯೆ ಮತ್ತು ಗುಣಮಟ್ಟ ಪರಿಶೀಲನೆ ನಡೆಯುತ್ತಿದ್ದು, ಜನವರಿ ಅಥವಾ ಅಂತಿಮವಾಗಿ ಫೆಬ್ರವರಿ 2025ರೊಳಗೆ ಯೋಜನೆ ಜಾರಿಗೆ ಬರಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss