- Advertisement -
www.karnatakatv.net :ಪಂಜಾಬಿನ ಮೊದಲ ದಲಿತ ಮುಖ್ಯಮಂತ್ರಿಯಾಗಿ ಚರಣ್ ಜಿತ್ ಸಿಂಗ್ ಛನ್ನಿ ಇಂದು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಸೋಮವಾರ ಕಾಂಗ್ರೆಸ್ ನ “ಚುನಾವಣಾ ತಂತ್ರ” ದ ಬಗ್ಗೆ ದಲಿತರು ಎಚ್ಚರದಿಂದರಬೇಕು ಅಂತ ಹೇಳಿದ್ದಾರೆ.
ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ದಲಿತರಲ್ಲದ ನಾಯಕನ ನೇತೃತ್ವ ದಲ್ಲಿ ನಡೆಯುತ್ತದೆ. ಛನ್ನಿ ನೇತೃತ್ವದಲ್ಲಿ ಅಲ್ಲ ಎಂದು ತಿಳಿದುಬಂದಿದೆ. ರಾಜಕೀಯ ಪಕ್ಷಗಳು ಬಿಕ್ಕಟ್ಟಿನ ಸಮಯದಲ್ಲಿ ಮಾತ್ರ ದಲಿತರ ಬಗ್ಗೆ ಯೋಚಿಸುತ್ತವೆ, ಛನ್ನಿಯನ್ನು ಮುಖ್ಯಮಂತ್ರಿ ಮಾಡಿರೋದು ಕಾಂಗ್ರೆಸ್ ಚುನಾವಣಾ ತಂತ್ರ ಅಂತ ಮಾಯಾವತಿ ಟೀಕಿಸಿದ್ದಾರೆ.
ಕಾಂಗ್ರೆಸ್‌ಗೆ ದಲಿತರ ಮೇಲೆ ನಂಬಿಕೆ ಇಲ್ಲ. ದಲಿತರು ಕಾಂಗ್ರೆಸ್ ನ್ನು ದ್ವಂದ್ವ ನಿಲುವಿನ ಬಗ್ಗೆ ಎಚ್ಚರದಿಂದರಬೇಕು. ದಲಿತರು ಈ ತಂತ್ರಕ್ಕೆ ಬೀಳೋದಿಲ್ಲ ಎನ್ನುವ ಸಂಪೂರ್ಣ ನಂಬಿಕೆ ನನಗಿದೆ ಅಂತ ಮಾಯಾವತಿ ಹೇಳಿದ್ದಾರೆ.
- Advertisement -

