Thursday, February 13, 2025

Latest Posts

ಐಪಿಎಲ್ ಗೆ ತಾಲಿಬಾನ್ ನಿಷೇಧ..!

- Advertisement -

www.karnatakatv.net :ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸ್ತಿರೋ ತಾಲಿಬಾನಿಗಳು ಇದೀಗ ಐಪಿಎಲ್ ಗೆ ನಿಷೇಧ ಹೇರಿದ್ದಾರೆ. ಕೆಲದಿನಗಳ ಹಿಂದೆ ಮಹಿಳಾ ಕ್ರಿಕೆಟ್ ನಿಷೇಧಿಸಿದ್ದ ತಾಲಿಬಾನ್ ಈ ಬಾರಿ ಆಫ್ಘಾನಿಸ್ತಾನದಲ್ಲಿ  ಐಪಿಎಲ್  ಪ್ರಸಾರ ಮಾಡಬಾರದು ಅಂತ ಆದೇಶ ಹೊರಡಿಸಿದೆ. ಐಪಿಎಲ್ ಇಸ್ಲಾಂ ವಿರೋಧಿಯಾಗಿದೆ. ಟೂರ್ನಿ ವೇಳೆ ಮಹಿಳೆಯರು ತುಂಡುಬಟ್ಟೆ ತೊಟ್ಟು ನೃತ್ಯ ಮಾಡ್ತಾರೆ ಅಲ್ಲದೆ ಐಪಿಎಲ್ ನಲ್ಲಿ ಮಹಿಳೆಯರು ಕಾಣಿಸಿಕೊಳ್ತಾರೆ ಅದು ಇಸ್ಲಾಂ ವಿರುದ್ಧವಾಗಿದೆ ಅಂತ ತಾಲಿಬಾನ್ ಸಮರ್ಥನೆ ನೀಡಿದೆ.

ಇನ್ನು ಈ ವಿಚಾರವನ್ನು ಮಾಜಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮಾಧ್ಯಮ ವ್ಯವಸ್ಥಾಪಕ ಮತ್ತು ಪತ್ರಕರ್ತ ಎಂ. ಇಬ್ರಾಹಿಂ ಮೊಮಾಂಡ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ತಾಲೀಬಾನಿಯರ ಈ ನಡೆಗೆ ವಿಶ್ವಾದ್ಯಂತ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

- Advertisement -

Latest Posts

Don't Miss