Sunday, October 5, 2025

Latest Posts

‘ಪಾಕಿಸ್ತಾನ್ ಜಿಂದಾಬಾದ್’ ಕೂಗಿಸುವುದು ಕಾಂಗ್ರೆಸ್ ಸರ್ಕಾರದ ಅಜೆಂಡಾ ಆಗಿರುವಂತಿದೆ: ವಿಜಯೇಂದ್ರ

- Advertisement -

Political News: ಗಣೇಶೋತ್ಸವದ ವೇಳೆ ರಾಜ್ಯದ ಹಲವೆಡೆ ಗಲಾಟೆ ನಡೆದಿದ್ದು, ರಾಜ್ಯ ಸರ್ಕಾರದ ತಪ್ಪಿನಿಂದಲೇ ಇಂಥ ಘಟನೆಗಳು ನಡೆಯುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಭದ್ರಾವತಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದಿರುವ ಬಗ್ಗೆ ಮಾತನಾಡಿದ್ದು, ವಿಧಾನಸೌಧದಲ್ಲಿಯೇ ‘ಪಾಕಿಸ್ತಾನ್ ಜಿಂದಾಬಾದ್’ ಕೂಗಿದ ಕಾಂಗ್ರೆಸ್ ನಿಂದ ಉತ್ತೇಜನ ಪಡೆದ ರಾಷ್ಟ್ರದ್ರೋಹಿ ದುಷ್ಕರ್ಮಿಗಳು ಈಗ ರಸ್ತೆ-ರಸ್ತೆಗಳಲ್ಲಿ ದೇಶದ್ರೋಹಿ ಘೋಷಣೆಗಳನ್ನು ಕೂಗಲು ಆರಂಭಿಸಿದ್ದಾರೆ. ಇದೆ ನಿಟ್ಟಿನಲ್ಲಿ ನೆನ್ನೆ ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲೂ ‘ಪಾಕಿಸ್ತಾನ್ ಜಿಂದಾಬಾದ್’ ಕೂಗಿರುವ ಘಟನೆ ಕಡು ದೇಶದ್ರೋಹ ಕೃತ್ಯವಾಗಿದೆ ಎಂದಿದ್ದಾರೆ.

ಧರ್ಮಸ್ಥಳವಾಯಿತು, ಸಾಂಪ್ರದಾಯಿಕ ದಸರಾ ಉತ್ಸವಕ್ಕೆ ಕಳಂಕ ಹಚ್ಚಲು ನಿರ್ಧರಿಸಲಾಯಿತು, ಮದ್ದೂರು ಹಾಗೂ ರಾಜ್ಯದ ಇತರೆಡೆಗಳಲ್ಲಿ ಗಣೇಶೋತ್ಸವದ ಮೇಲೆ ಕಲ್ಲು ತೂರಿಸಿ ಕರ್ನಾಟಕದ ಶಾಂತಿ ಹದಗೆಡಿಸಲು ಹೊರಟಿದ್ದಾರೆ.

ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ಏನು ಮಾಡಲು ಹೊರಟಿದೆ? ಈ ರೀತಿಯ ದೇಶದ್ರೋಹಿ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿ ಆಗ್ರಹಪಡಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.

- Advertisement -

Latest Posts

Don't Miss