astrology:
ಗುರುವಾರ ಜನಿಸಿದವರು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ, ನೇರವಾಗಿ ಮಾತನಾಡುವ ಇವರು ಮಾತಿನಲ್ಲಿ ಹಿಡಿತವನ್ನು ಇಟ್ಟುಕೊಂಡರೆ ಉತ್ತಮ, ಗುರುವಾರ ಹುಟ್ಟಿದವರು ಬಹಳ ಅದೃಷ್ಟವಂತರು, ಹಿಂದೂ ಸಂಪ್ರದಾಯದ ಪ್ರಕಾರ ಗುರುಗಳ ಕೃಪೆ ಇವರ ಮೇಲೆ ಇರುತ್ತದೆ.ಇವರಿಗೆ ಹೆಚ್ಚು ಅಪೂರ್ವವಾದ ಸಂಪದ್ಭರಿತ ಫಲಿತಾಂಶಗಳು ಸಿಗುತ್ತದೆ. ಮನುಷ್ಯ ಹುಟ್ಟಿದ ಘಳಿಗೆ, ಸಮಯ, ವಾರ,ತಿಂಗಳುಗಳ ಅನುಸಾರವಾಗಿ ಅವರ ಭವಿಷ್ಯ ನಿರ್ಧಾರವಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಗುರುಗ್ರಹ ಬಹಳ ಪ್ರವಾವಶಾಲಿ. ಹೀಗಾಗಿ ಗುರು ಬಲ ಇದ್ದರೆ ಸಾಕು ಅವರ ಜೀವನದಲ್ಲಿ ಎಲ್ಲವೂ ಶುಭ ಫಲಗಳು ದೊರೆಯುತ್ತದೆ ,ಇನ್ನು ಗುರುವಿನವಾರ ಗುರುವಾರ ಜನಿಸಿದವರು ಸದಾ ಸಂತೋಷದ ಜೀವನವನ್ನು ನಡೆಸುತ್ತಾರೆ, ಹಾಗೂ ಅವರು ಉದಾರ ಮನೋಭಾವವನ್ನು ಹೊಂದಿರುತ್ತಾರೆ .ಹಾಗಾದರೆ ಗುರುವಾರ ಜನಿಸಿದವರ ವ್ಯಕ್ತಿತ್ವವನ್ನು ತಿಳಿದುಕೊಳ್ಳೋಣ .
ಗುರುವಾರ ಜನಿಸಿದವರು ತಮ್ಮ ಜೀವನದಲ್ಲಿ ಸಂಪತ್ತನ್ನು ಹೊಂದಲಿದ್ದಾರೆ, ಹಾಗೂ ಅವರು ಏನಾದರು ಸಾಧಿಸುವುದರಲ್ಲಿ ಮುಂದೆ ಇರುತ್ತಾರೆ. ಕೆಲವೊಮ್ಮೆ ಖಿನ್ನತೆಯ ಪರಿಸ್ಥಿತಿ ಇದ್ದರೂ ಇವರು ತಲೆಕೆಡಿಸಿ ಕೊಳ್ಳುವುದಿಲ್ಲ, ಅವರ ಜೀವನದಲ್ಲಿ ಅವರು ಎಂದಿಗೂ ಹೋಪ್ಸ್ ಕಳೆದುಕೊಳ್ಳುವುದಿಲ್ಲ. ಹೀಗಾಗಿ ಜೀವನದಲ್ಲಿ ಎಷ್ಟೇ ಕಷ್ಟ ಬಂದರು ದೃಢವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಬೇರೆಯವರಿಗೆ ಸಲಹೆ ನೀಡುತ್ತಾರೆ ಹಾಗೂ ಇವರ ಬಳಿ ಸಲಹೆ ಸೂಚನೆಗಳನ್ನು ಕೇಳಿಪಡೆಯುತ್ತಾರೆ.ಇವರ ಆರೋಗ್ಯ ಅತ್ಯುತ್ತಮವಾಗಿರುತ್ತದೆ, ಆದರೆ ಶನಿಯು ನಿಮ್ಮ ಮನೆಯಲ್ಲಿ ಕೆಟ್ಟದಾಗಿ ಇದ್ದರೆ, ಹಲ್ಲು ಹಾಗೂ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಡಬಹುದು ಮತ್ತು ಮದುವೆಯಲ್ಲಿ ವಿಳಂಬ ವಾಗಬಹುದು ಹಾಗೂ ನಿದ್ರೆಯ ಸಮಸ್ಯೆ ಕಾಡಬಹುದು .
ಗುರುವಾರ ಜನಿಸಿದವರ ವೃತ್ತಿ ಜೀವನ ಹೇಗಿರುತ್ತದೆ …?
ಗುರುವಾರ ಜನಿಸಿದವರು ಹುಟ್ಟಿನಿಂದಲೇ ನಾಯಕತ್ವ ಗುಣವನ್ನು ಹೊಂದಿರುತ್ತಾರೆ ,ಇವರದ್ದು ಎಲ್ಲರು ಮೆಚ್ಚುವಂತಹ ಗುಣವಾಗಿರುತ್ತದೆ. ಇವರು ರಾಜಕೀಯದಲ್ಲಿದ್ದರೆ ಏನನ್ನಾದರೂ ಸಾಧಿಸುವ ಶಕ್ತಿ ಇವರಲ್ಲಿದೆ. ಹಾಗೂ ಉನ್ನತ ಮಟ್ಟದ ಹುದ್ದೆಗಳನ್ನು, ಜವಾಬ್ದಾರಿಗಳನ್ನು ಸುಲಭವಾಗಿ ಕೈಗೊಂಡು ಕಾರ್ಯ ನಿರ್ವಹಿಸುವ ಶಕ್ತಿ ಇವರಿಗಿದೆ. ನಿಮ್ಮ ಆಲೋಚನೆಗಳನ್ನು ಯಾರೂ ಧಿಕ್ಕರಿಸುವುದಿಲ್ಲ, ಪ್ರತಿಯೊಬ್ಬರೂ ನಿಮ್ಮನ್ನು ಗೌರವಿಸುತ್ತಾರೆ ಮತ್ತು ನಿಮ್ಮ ಆಲೋಚನೆಗಳನ್ನು ಗಮನಕೊಟ್ಟು ಕೇಳುತ್ತಾರೆ.
ಗುರುವಾರ ಜನಿಸಿದವರ ಪ್ರೀತಿ ಜೀವನ ಹೇಗಿರುತ್ತದೆ …!
ಪ್ರೀತಿ ವಿಷಯದಲ್ಲಿ ಇವರು ತುಂಬಾ ಪೊಸೆಸೀವ್ಆಗಿರುತ್ತಾರೆ ,ತಮ್ಮ ಸಂಗತಿಯನ್ನು ಬಹಳಷ್ಟು ಪ್ರೀತಿಸುತ್ತಾರೆ, ಎದುರಿಗೆ ಯಾರೇ ಇದ್ದರು ಕೂಡ ಲೆಕ್ಕಿಸದೆ ಇವರು ತಮಗನ್ನಿಸಿದ್ದನ್ನು ನೇರಾವಾಗಿ ಹೇಳಿಬಿಡುತ್ತಾರೆ ,ಆದಕಾರಣ ಇವರ ಪ್ರೀತಿಯ ಜೀವನವ ಸುಂದರವಾಗಿರುತ್ತದೆ. ಹೆಚ್ಚು ಭಾವೋದ್ರೇಕಕ್ಕೆ ಒಳಗಾಗುತ್ತಾರೆ. ತಮ್ಮ ಸಂಗಾತಿಯನ್ನು ಮೆಚ್ಚಿಸಲು ಎಂತಹ ಕಾರ್ಯ ಮಾಡುವುದಕ್ಕೂ ಸಿದ್ಧರಾಗಿರುತ್ತಾರೆ. ಆದರೆ, ತಮ್ಮನ್ನು ಪ್ರೀತಿಸುವವರ ಭಾವನೆಗಳನ್ನು ಅರ್ಥಮಾಡಿಕೊಂಡು ಬಾಳಿದರೆ ಸಾಮರಸ್ಯ, ಶಾಂತಿಯ ಜೊತೆಗೆ ಪ್ರೀತಿಯ ಬಾಳ್ವೆ ಇವರದ್ದಾಗುತ್ತದೆ. ಸ್ನೇಹಿತರ ಬಳಿ ರಹಸ್ಯಗಳನ್ನು ಹಂಚಿಕೊಳ್ಳಲು ಇವರು ಹೆಚ್ಚು ಉತ್ಸಾಹದಿಂದ ಇರುತ್ತಾರೆ .
ಗುರುವಾರ ಜನಿಸಿದವರ ಮದುವೆಯ ಜೀವನ ….?
ನೇರ ನುಡಿ ವ್ಯಕ್ತಿತ್ವವನ್ನು ಹೊಂದಿರುವ ಇವರು ತಮ್ಮ ನಾಲಗೆಯನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬೇಕಾಗುತ್ತದೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ನಿಮ್ಮ ವೈವಾಹಿಕ ಜೀವನ ಉಳಿಯುವುದಿಲ್ಲ ಈ ವಿಷಯದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಜೊತೆಗೆ ಮಾತನ್ನು ನಿಯಂತ್ರಣದಲ್ಲಿಟ್ಟು ಕೊಂಡಷ್ಟೂ ವೈವಾಹಿಕ ಜೀವನವು ಯಶಸ್ವಿಯಾಗಬಹುದು. ಇವರ ಸಂಸಾರದಲ್ಲಿ ವಾದ ವಿವಾದಗಳು ಇದ್ದರು ಸಂಗಾತಿಯ ಭಾವನೆಗಳನ್ನು ಸ್ಪಂದಿಸುವ ಮನೋಭಾವವನ್ನು ಹೊಂದಬೇಕು. ವ್ಯವಹಾರ ಮಾಡುವಾಗ ಸೂಕ್ಷ್ಮವಾಗಿ ಯೋಚಿಸಿ ಮುನ್ನಡೆಯಿರಿ .
ಗುರುವಾರ ಜನಿಸಿದವರ ಅದೃಷ್ಟ ಸಂಖ್ಯೆ 3.ಹಾಗೂ,ಅದೃಷ್ಟದ ಬಣ್ಣ, ಆರೆಂಜ್ ಮತ್ತು ಬ್ರೌನ್ ಗುರುವಾರದಂದು ಗುರುಗಳ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ ಒಳ್ಳೆಯ ಫಲಗಳು ದೊರೆಯುತ್ತದೆ ಹಾಗೂ 3, 21 ಮತ್ತು 30 ದಿನಾಂಕಗಂದು ಜನಿಸಿದವರೊಂದಿಗೆ ನೀವು ಸ್ನೇಹ ಬೆಳೆಸುತ್ತೀರಿ .
ಜ್ಯೋತಿಷ್ಯದ ಪ್ರಕಾರ ಸೋಮವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?
ಜ್ಯೋತಿಷ್ಯದ ಪ್ರಕಾರ ಮಂಗಳವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?
ಜ್ಯೋತಿಷ್ಯದ ಪ್ರಕಾರ ಬುಧವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?