ಹಾಸನ : ಜಿಲ್ಲೆಯ ಬೇಲೂರು ಪಟ್ಟಣದ ನೆಹರು ನಗರದಲ್ಲಿ ಹಾಡುಹಗಲೇ ಚಿರತೆಯೊಂದು ಕಾಣಿಸಿಕೊಂಡಿದ್ದು ಜನರು ಭಯಭೀತರಾಗಿದ್ದಾರೆ. ಬೇಲೂರಿನ ನೆಹರು ನಗರದಲ್ಲಿರುವ ಮನೆಗಳ ಸುತ್ತ ಮುತ್ತ ಚಿರತೆ ನಡೆದಾಡಿದ ಹೆಜ್ಜೆಗಳು ಕಾಣಿಸಿಕೊಂಡಿವೆ.
ಇತ್ತೀಚಿಗೆ ಕಾಡು ಮೃಗಗಳು ಆಹಾರವನ್ನು ಅರಸಿ ನಾಡಿನತ್ತ ಹೆಜ್ಜೆ ಇಡುತ್ತಿವೆ. ಗ್ರಾಮಗಳಲ್ಲಿರುವ ಸಾಕು ಪ್ರಾಣಿಗಳನ್ನು ತಿಂದು ಮುಗಿಸುತ್ತಿವೆ. ಹಾಗೂ ಜನಗಳ ಮೇಲೆ ಆಕ್ರಮಣ ಮಾಡಿತ್ತಿವೆ ಹಾಗಾಗಿ ಅರಣ್ಯ ಇಲಾಖೆ ಎಚ್ಚರಿಕೆ ನೀಡುತ್ತಿದೆ,
ರಸ್ತೆಯ ಪಕ್ಕದಲ್ಲಿರುವ ಚಿರತೆ ಪ್ರಯಾಣಿಕರೊಬ್ಬರು ಕಾರಿನಲ್ಲಿ ಸಂಚರಿಸುವಾಗ ಕಾರಿಗೆ ಅಡ್ಡವಾಗಿ ಬಂದಿದೆ,ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮೈಕ್ ಮೂಲಕ ಅನೌನ್ಸ್ ಮಾಡಿ ಗ್ರಾಮದಲ್ಲಿ ಚಿರತೆ ಇದ್ದು ಅದು ನಿಮ್ಮ ಮನೆಯ ಸುತ್ತ ಮುತ್ತ ತಿರುಗಾಡುತ್ತಿದೆ ಯಾರು ಸಹ ಅನಗತ್ಯವಾಗಿ ಹೊರಗೆ ಬರಬಾರದು ಎಂದು ಸೂಚನೆ ನೀಡಿದರು .ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಬೋನ್ ಇಟ್ಟುಕೊಂಡು ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸುತಿದ್ದಾರೆ.
Bulls- ಹತ್ತು ಗಂಟೆಯಲ್ಲಿ 18 ಎಕರೆ ಭೂಮಿಯನ್ನು ಉಳುಮೆ ಮಾಡಿದ ಜೋಡೆತ್ತುಗಳು