Wednesday, July 2, 2025

Latest Posts

ಚೀತಾಗಳಿಗೆ ಶ್ವಾನಗಳ ಕಣ್ಗಾವಲು…?!

- Advertisement -

National  News:

ಭಾರತಕ್ಕೆ ನಮೀಬಿಯಾದಿಂದ ಚಿರತೆಗಳನ್ನು ಈಗಾಗಲೇ ಕರೆತರಲಾಗಿದೆ.ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತರಲಾಗಿರುವ ಚೀತಾಗಳಿಗೆ ವಿಶೇಷ ಭದ್ರತೆ ಕಲ್ಪಿಸಲಾಗುತ್ತಿದೆ. ಚೀತಾಗಳಿಗೆ ಹೆಚ್ಚಿನ ಭದ್ರತೆ ನೀಡುವ ಸಲುವಾಗಿ ಶ್ವಾನಗಳಿಗೆ ವಿಶೇಷ ತರಬೇತಿ ನೀಡಿ ಡಾಗ್ ಸ್ಕ್ವಾಡ್‌ನ್ನೂ ಕಣ್ಗಾವಲಿಗೆ ಕಳುಹಿಸಲು ಕೆಲಸಗಳಾಗುತ್ತಿವೆ ಎಂದು  ತಿಳಿದು ಬಂದಿದೆ. ಕಳ್ಳ ಬೇಟೆಗಾರರಿಂದ ಅವುಗಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಇಂಡೋ-ಟಿಬೆಟಿಯನ್ ಬಾರ್ಡರ್  ಪೋಲೀಸ್ ಫೋರ್ಸ್  ರಾಷ್ಟ್ರೀಯ ಶ್ವಾನಗಳ ತರಬೇತಿ ಕೇಂದ್ರದಲ್ಲಿ ಡಬ್ಲ್ಯುಡಬ್ಲ್ಯುಎಫ್-ಇಂಡಿಯಾ ಸಹಯೋಗದೊಂದಿಗೆ ಜರ್ಮನ್  ಶೆಫರ್ಡ್ ತಳಿಯ ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ. ಹರಿಯಾಣದ ಪಂಚಕುಲದಲ್ಲಿರುವ ಶ್ವಾನಗಳು ಈ ವಿಶೇಷ ಕರ‍್ಯಪಡೆಯಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ತರಬೇತಿ ಪಡೆಯುತ್ತಿವೆ ಎಂದು ಐಟಿಬಿಪಿಯ ಮೂಲ ತರಬೇತಿ ಕೇಂದ್ರದ ಐಜಿ ಈಶ್ವರ್ ಸಿಂಗ್ ದುಹಾನ್ ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಏಳು ತಿಂಗಳ ಸುದೀರ್ಘ ಅವಧಿಯ ತರಬೇತಿ ಇದಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು: ಪಾಕ್ ಉಗ್ರನ ಹತ್ಯೆ..?!

ನಟಿ ಆಶಾ ಪರೇಖ್ ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಘೋಷಣೆ

ಅಮಿತ್ ಶಾ ನೇತೃತ್ವದಲ್ಲಿ ಸಭೆ:RAW,IBN,ED ತನಿಖೆ ಕುರಿತಾಗಿ ಚರ್ಚೆ..!

- Advertisement -

Latest Posts

Don't Miss