Friday, October 31, 2025

Latest Posts

ನನಗೆ ಮೊದಲ ಆದ್ಯತೆ ಮೈಷುಗರ್ ಕಾರ್ಖಾನೆ ಪ್ರಾರಂಭವಾಗಬೇಕು

- Advertisement -

ಮಂಡ್ಯ: ಮಂಡ್ಯದಲ್ಲಿ ಮಾತನಾಡಿದ ಮಾಜಿ ಸಚಿವ ಚೆಲುವರಾಯಸ್ವಾಮಿ, ನನಗೆ ಮೊದಲ ಆದ್ಯತೆ ಕಾರ್ಖಾನೆ ಪ್ರಾರಂಭವಾಗಬೇಕು ಎಂದಿದ್ದಾರೆ.

ನನಗೆ ಒ&ಎಂ ಗೆ ಆಕ್ಷೇಪಾ ಇಲ್ಲಾ. ನನಗೆ ಮೊದಲ ಆದ್ಯತೆ ಕಾರ್ಖಾನೆ ಪ್ರಾರಂಭವಾಗಬೇಕು. ಸುರಕ್ಷಿತವಾಗಿ ಮತ್ತೆ 6 ತಿಂಗಳು ನಿಲ್ಲುವಂತಾಗಬಾರದು. ಅವತ್ತಿಂದ ಇವತ್ತಿನ ವರೆಗೆ ಸರ್ಕಾರಗಳು ದುಡ್ಡು ಕೊಟ್ಟಿದ್ರು. ಸರಿಯಾದ ರೀತಿ ಮ್ಯಾನೇಜ್ಮೆಂಟ್ ಮಾಡಕ್ಕಾಗದೇ ವಿಫಲವಾಗಿದೆ. 2 ವರ್ಷದಿಂದ ಕಾರ್ಖಾನೆ ನಿಲ್ಲೋ ಅವಶ್ಯಕತೆ ಇರಲಿಲ್ಲಾ. ಆದ್ರೂ ನಿಲ್ಲಿಸಿದ್ದಾರೆ. ಸಿಎಂ ಭರವಸೆ ಕೊಟ್ಟಿದ್ದಾರೆ, ನಾನು ಮನವಿ ಮಾಡಿದ್ದೆನೆ. ಇಷ್ಟೆಲ್ಲಾ ಸಮಸ್ಯೆ ಇದ್ರುನೂ ಮಂಡ್ಯ ಜಿಲ್ಲೆಗೆ ಅನ್ಯಾಯ ಆಗುವುದಕ್ಕೆ ಬಿಡಲ್ಲಾ. ತಕ್ಷಣವೇ ಪ್ರಾರಂಭ ಮಾಡುತ್ತೇವೆ. ಈಗ ಖಾಸಗೀಕರಣಕ್ಕೆ ಹೋಗಲ್ಲಾ ಎಂದು ಸ್ಪಷ್ಟನೆ ನೀಡಿದ್ದಾರೆ.

https://youtu.be/VgMi86sGmAg

ಒ & ಎಂ ಪದ್ದತಿಯಲ್ಲೆ ಮಾಡ್ತೇವೆ. ಆಮೇಲೆ ಪೂರ್ಣ ಜವಾಬ್ದಾರಿ ನಾವೇ ತೆಗೆದುಕೊಳ್ಳಬಹುದು ಒ& ಎಂ ನಲ್ಲಿ ನಡೇಸಬೇಕಾ ಎಂದು ತೀರ್ಮಾನ ತೆಗೆದುಕೊಳ್ಳೋಣಾ. ಸದ್ಯಕ್ಕೆ ಒ &ಎಂನಲ್ಲಿ ನಡೆಸುತ್ತೇವೆ ಎಂದಿದ್ದಾರೆ. ತಕ್ಷಣವೇ ಕಾರ್ಖಾನೆ ನಡೆಸುವಂತೆ ಮನವಿ ಮಾಡಿದ್ದೇವೆ.

https://youtu.be/GpJpTWTYsow

ಕಾರ್ಖಾನೆ ಪ್ರಾರಂಭಿಸುತ್ತೇವೆ ಎಂದು ಸಿಎಂ ಒಪ್ಪಿಕೊಂಡಿದ್ದಾರೆ. ಪಾಂಡವಪುರ ಕಾರ್ಖಾನೆ ಆಗಲೇ ಗುತ್ತಿಗೆ ನೀಡಲಾಗಿದೆ. ಅದರ ಬಗ್ಗೆ ಮಾತನಾಡುವುದಿಲ್ಲಾ. ನನಗೆ ಮೊದಲು ಮೈಶುಗರ್ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಬೇಕು ಎಂದು ಚೆಲುವ ರಾಯಸ್ವಾಮಿ ಹೇಳಿದ್ದಾರೆ.
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ

- Advertisement -

Latest Posts

Don't Miss