Sunday, September 8, 2024

Latest Posts

ವರ್ಷವಿಡೀ ಮೊಟ್ಟೆಯಿಡುತ್ತೆ ಈ ಕೋಳಿ..!!!

- Advertisement -

www.karnatakatv.net :ರಾಯಚೂರು: ಸಾಮಾನ್ಯವಾಗಿ ಒಂದು ಕೋಳಿ ಸುಮಾರು ಎರಡು ಮೂರು ತಿಂಗಳಿಗೊಮ್ಮೆ 10-15 ಮೊಟ್ಟೆ ಇಡೋದನ್ನ ನೋಡಿದ್ದೇವೆ. ಆದ್ರೆ ಈ ಕೋಳಿ ಮಾತ್ರ ಇಡೀ ವರ್ಷ ದಿನಕ್ಕೊಂದು ಮೊಟ್ಟೆಯಿಡುತ್ತೆ.

ಹೌದು.. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಈ ಯುವಕ ನರಸಿಂಗ ರೆಡ್ಡಿ ಸದ್ಯ ಈ ಕೋಳಿಗಳನ್ನು ಸಾಕುತ್ತಿದ್ದು ಭರ್ಜರಿ ಲಾಭ ಗಳಿಸ್ತಿದ್ದಾರೆ. ನಾಟಿ ಕೋಳಿಯಲ್ಲಿರುವಷ್ಟೇ ಪ್ರೊಟೀನ್ ಅಂಶವನ್ನೇ ಈ ಕೋಳಿಗಳು ಹೊಂದಿದ್ದು ತಿನ್ನೋದಕ್ಕು ಟೇಸ್ಟಿಯಾಗಿರುತ್ತೆ.

ಈ ವಿಶಿಷ್ಟ ಕೋಳಿ ತಳಿಯ ಹೆಸರು ಬಿವಿ380 ಅಂತ. ಸಣ್ಣ ಮರಿ ಇರೋವಾಗಲೇ ಒಂದು ಇಂಜೆಕ್ಷನ್ ನೀಡಿದ್ರೆ ಸಾಕು, ಇದು ಹುಂಜದ ಸಹಾಯವೂ ಇಲ್ಲದೆ ತನ್ನಿಂತಾನೇ ಮೊಟ್ಟೆಯಿಡುತ್ತೆ. ಕೇರಳಾ ಮೂಲದ ತಳಿಯ ಕೋಳಿ ವರ್ಷವಿಡೀ ಮೊಟ್ಟೆಯಿಡುತ್ತೆ. ಹೀಗೆ 380 ದಿನಗಳು ಸತತವಾಗಿ ಮೊಟ್ಟೆಯಿಡೋ ಸ್ಪೆಷಾಲಿಟಿ ಹೊಂದಿದೆ.

ಇನ್ನು ನರಸಿಂಹ ರೆಡ್ಡಿ ಸದ್ಯ  ಒಂದು ಎಕರೆ ಜಾಗದಲ್ಲಿ ಸಣ್ಣದೊಂದು ಶೆಡ್ ನಿರ್ಮಿಸಿಕೊಂಡು ಇಲ್ಲಿ 300 ಕೋಳಿಗಳನ್ನು ಸಾಕುತ್ತಿದ್ದಾರೆ. ಹೀಗಾಗಿ ಪ್ರತಿದಿನ 300 ಮೊಟ್ಟೆಗಳ ಉತ್ಪಾದನೆಯಾಗ್ತಿದೆ. ಇದ್ರಿಂದ ಒಂದೇ ದಿನಕ್ಕೆ 2 ಸಾವಿರ ರೂಪಾಯಿ ಆದಾಯ ಗಳಿಸ್ತಿದ್ದಾರೆ.

ಇನ್ನೂ ಈ ಬಿವಿ380 ತಳಿಯ ಕೋಳಿ  ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸೋ ಆದಾಯದ ಮೂಲವಾಗಿದೆ. ಅಲ್ಲದೆ ಅತ್ಯಂತ ಕಾಳಜಿಯಿಂದ ಕೋಳಿ ಸಾಕಾಣಿಕೆ ಮಾಡ್ತಿರೋ ನರಸಿಂಹ ರೆಡ್ಡಿ ಇತರೆ ಯುವಕರಿಗೆ ಮಾದರಿಯಾಗಿದ್ದಾರೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ-ರಾಯಚೂರು

- Advertisement -

Latest Posts

Don't Miss