Chikkamagaluru : ರಾಜ್ಯಾದ್ಯಂತ ಹಲವೆಡೆ ಬಿಟ್ಟೂ ಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇದೆ. ಮಳೆಯಿಂದಾಗಿ ಅನೇಕ ಅನಾಹುತಗಳು ಕೂಡಾ ದಿನನಿತ್ಯ ನಡೆಯುತ್ತಲೇ ಇವೆ. ಆದರೂ ಅನೇಕ ಕಡೆ ಪ್ರವಾಸಿಗರಂತೂ ಇದರ ಗೊಡವೇ ಇಲ್ಲದಂತೆ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.
ಹೌದು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಿಂದಾಗಿ ಭೂ ಕುಸಿತ, ರಸ್ತೆ ಸಂಪರ್ಕ ಕಡಿತದಂತಹ ಅವಘಡಗಳು ಸಂಭವಿಸುತ್ತಿದೆ. ಇದೇ ವೇಳೆ ಗಿರಿ ಶ್ರೇಣಿ, ಚಾರ್ಮಾಡಿ ಘಾಟಿ ಸೇರಿದಂತೆ ವಿವಿಧೆಡೆಗಳಲ್ಲಿ ಪ್ರವಾಸಿಗರು ತನ್ನ ಹುಚ್ಚಾಟ ನಡೆಸುತ್ತಿದ್ದಾರೆ.
ಮಳೆ ಹೆಚ್ಚಾದಂತೆ ಅನಾಹುತಗಳು ಹೆಚ್ಚಾಗುವ ಸಾಧ್ಯತೆಗಳೂ ಹೆಚ್ಚಿರುತ್ತದೆ. ಈ ಹಿನ್ನೆಲೆ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುವ ತಮ್ಮ ಯೋಜನೆಯನ್ನು ಸಧ್ಯಕ್ಕೆ ಮುಂದೂಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ರಾಜ್ಯದ ಮತ್ತು ಅಂತರರಾಜ್ಯ ಪ್ರವಾಸಿಗರಿಗೆ ಮನವಿ ಮಾಡಿಕೊಂಡಿದ್ದಾರೆ.
BBMP: ವರ್ಬ್ ಬ್ಯಾಟಲ್ ಚರ್ಚಾಸ್ಪರ್ಧೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್
House visit: ಹುಬ್ಬಳ್ಳಿಯಲ್ಲಿ ಮಳೆ ಪೀಡಿತ ಪ್ರದೇಶಗಳಿಗೆ ಸಚಿವ ಸಂತೋಷ ಕಾರ್ ಬೇಟಿ