Sunday, April 20, 2025

Latest Posts

Rain : ಅಡಿಕೆ ತೋಟ ನೋಡಲು ತೆರಳಿದ್ದ ವೃದ್ಧೆ ಶವ ಪತ್ತೆ

- Advertisement -

Chikkamagaluru News : ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಇನ್ನೂ ನಿಂತಿಲ್ಲ. ಅಡಿಕೆ ತೋಟ ನೋಡಲು ತೆರಳಿದ್ದ ವೃದ್ಧೆ ನಾಪತ್ತೆಯಾಗಿದ್ದು, ತಾಯಿಹಳ್ಳದಲ್ಲಿ ಕೊಚ್ಚಿಹೋಗಿದ್ದ ವೃದ್ದೆಯ ಶವ ಪತ್ತೆಯಾಗಿದೆ.

ಚಿಕ್ಕಮಗಳೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಹೊಸಸಿದ್ರಳ್ಳಿ ಗ್ರಾಮದ ಬಳಿ 62 ವರ್ಷದ ವೃದ್ದೆ ರೇವಮ್ಮ ನಿನ್ನೆ ತೋಟಕ್ಕೆ ಹೋಗುವ ವೇಳೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದ್ದು, ಅಡಿಕೆ ತೋಟದ 200 ಮೀಟರ್ ದೂರದಲ್ಲಿ ಶವ ಇಂದು ಜುಲೈ 26 ರಂದು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಮಳೆಗೆ ಒಟ್ಟು ಮೂವರು ಜೀವ ಕಳೆದುಕೊಂಡಂತಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹಾಗೂ ಗಿರಿಪ್ರದೇಶದಲ್ಲಿ  ಧಾರಾಕಾರ ಮಳೆಯಾಗುತ್ತಿರುವ  ಹಿನ್ನೆಲೆ ಹಳ್ಳಕೊಳ್ಳಗಳು ತುಂಬಿ  ಹರಿಯುತ್ತಿದ್ದು, ಜನರು ಹಳ್ಳದಾಟುವಾಗ ಮಳೆ ಅಬ್ಬರ ಇಳಿಯುವಾಗುವವರೆಗೆ ಎಚ್ಚರವಹಿಸಬೇಕಾಗಿ ಸೂಚಿಸಲಾಗಿದೆ.

MB Pateel : ಮಮದಾಪುರಕೆರೆ ವ್ಯಾಪ್ತಿಯಲ್ಲಿ ಸುಮಾರು 56,000 ಗಿಡಗಳು ಅರಳುತ್ತಿವೆ..!

Meeting : ಅತಿವೃಷ್ಟಿ ಹಿನ್ನೆಲೆ ಜಿ.ಪಂ. ಸಿಇಒಗಳೊಂದಿಗೆ ಸಿಎಂ ಡಿಸಿಎಂ ಸಭೆ

Siddaramaiah : ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಜಂಟಿ ಪತ್ರಿಕಾಗೋಷ್ಠಿ: ಮಳೆಹಾನಿ ಕ್ರಮದ ಬಗ್ಗೆ ಚರ್ಚೆ

- Advertisement -

Latest Posts

Don't Miss