Saturday, July 27, 2024

Latest Posts

Siddaramaiah : ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಜಂಟಿ ಪತ್ರಿಕಾಗೋಷ್ಠಿ: ಮಳೆಹಾನಿ ಕ್ರಮದ ಬಗ್ಗೆ ಚರ್ಚೆ

- Advertisement -

Banglore News : ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಇಂದು ಜಂಟಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯದ ಹವಾಮಾನ, ಮಳೆ ಹಾನಿ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಕೊರತೆಯಾಗದಂತೆ ವಿತರಣೆ ಮಾಡಬೇಕು. ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿ ವಾಸ ಮಾಡಬೇಕು. ತುರ್ತು ಸಂದರ್ಭದಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ದೊರೆಯುವಂತೆ ಇರಬೇಕು. ಶಾಲಾ ಅಂಗನವಾಡಿ ಕಟ್ಟಡಗಳು ಸೋರುವಂತೆ ಇದ್ದರೆ ಗುರುತಿಸಿ ಎಸ್ ಡಿ ಆರ್ ಎಫ್ ಅನುದಾನದಲ್ಲಿ ರಿಪೇರಿ ಮಾಡಲಾಗುತ್ತದೆ.

ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸರಾಸರಿ 20 ಕೋಟಿ ಅನುದಾನ ಇದ್ದು ಅಗತ್ಯ ಇರುವ ಕಡೆ ಬಳಸಿ. ಮಳೆಯಿಂದ ಪ್ರಾಣ ಹಾನಿ, ಮನೆ ಹಾನಿ ಉಂಟಾಗಿರುವವರಿಗೆ ಪರಿಹಾರ ವಿತರಣೆ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಜುಲೈ 29 ರವರಿಗೆ ಉತ್ತಮ ಮಳೆಯಾಗುತ್ತಿದೆ.

ಆಗಸ್ಟ್ ತಿಂಗಳಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು ಪ್ರತಿದಿನ ರಾಜ್ಯದಲ್ಲಿ ಸರಾಸರಿ 42 ಟಿಎಂಸಿ ನೀರು ಜಲಾಶಯಗಳಲ್ಲಿ ಶೇಖರಣೆ ಆಗುತ್ತಿದೆ. ರಾಜ್ಯದಲ್ಲಿ ಜೂನ್ 01 ರಿಂದ ಇಲ್ಲಿಯವರೆಗೆ 48 ಮಾನವ ಜೀವ ಹಾನಿ ಆಗಿದೆ.

35 ಜನರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಸಂಪೂರ್ಣ ವಾಗಿ 57 ಮನೆಗಳು, ತೀವ್ರವಾಗಿ 208 ಹಾಗೂ 2682 ಮನೆಗಳು ಭಾಗಶಃ ಹಾನಿಗೊಂಡಿದ್ದು, ಸರ್ಕಾರ ಅಗತ್ಯ ಪರಿಹಾರ ನೀಡಲು ಬದ್ಧವಾಗಿದೆ ಎಂದು ಸಿಎಂ ಡಿಸಿಎಂ ಚರ್ಚೆ ಬಳಿಕ ಹೇಳಿದರು.

Rain : ಉಡುಪಿಯಲ್ಲಿ ಜುಲೈ27 ರಂದು ಪ್ರಾಥಮಿಕ, ಪ್ರೌಢ ಶಾಲೆ, ಪಿಯುಸಿ ಗೆ ಮಾತ್ರ ರಜೆ ಘೋಷಣೆ

Naleen Kumar Kateel : ಗಲಬೆಕೋರರನ್ನು ಬಿಡುಗಡೆ ಮಾಡಿದರೆ ಉಗ್ರ ಹೋರಾಟ ನಡೆಯುವುದು : ಕಟೀಲ್

Pregnant Women : ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಸಾವು : ಕುಟುಂಬಸ್ಥರ ಆಕ್ರೋಶ

- Advertisement -

Latest Posts

Don't Miss