Thursday, November 13, 2025

Latest Posts

ಖಾಸಗಿ ಬಸ್ ಮಾಲೀಕರ ಲಾಭಿಗೆ ಮಣಿದ ಚಿಕ್ಕನಾಯಕನಹಳ್ಳಿ ಡಿಪೋ KSRTC ಅಧಿಕಾರಿಗಳು

- Advertisement -

Tumakuru News: ಸ್ವಾತಂತ್ರ್ಯದ ನಂತರವೂ ಸರ್ಕಾರಿ ಬಸ್ ಓಡದ ಮೈಲುಕಬ್ಬೆ ಗ್ರಾಮಕ್ಕೆ, ಹಲವು ವರ್ಷಗಳ ಹೋರಾಟದ ಬಳಿಕ ಕೇವಲ ಮೂರು ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿಯಿಂದ ksrtc ಬಸ್ ಸೇವೆ ಆರಂಭವಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಬಸ್ ಸೇವೆ ಅಚಾನಕ್ ನಿಂತಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಸ್ ಮೂಲಕ ಪ್ರತಿದಿನ ಸುಮಾರು 69 ಮಕ್ಕಳು ಶಾಲೆ ಮತ್ತು ಕಾಲೇಜುಗಳಿಗೆ ತೆರಳುತ್ತಿದ್ದರು. ಬಸ್ ಸೇವೆ ಸ್ಥಗಿತಗೊಂಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೀವ್ರ ಅಸೌಕರ್ಯಕ್ಕೆ ಒಳಗಾಗಿದ್ದಾರೆ.

ಗ್ರಾಮದ ಮುಖಂಡ ಹನುಮಂತಪ್ಪ ಮಾತನಾಡಿ, “ನಾವು ವರ್ಷಗಳ ಕಾಲ ಹೋರಾಡಿ ಶಾಸಕ ಸಿ.ಬಿ. ಸುರೇಶ್ ಬಾಬು ಅವರ ಸಹಕಾರದಿಂದ ಬಸ್ ಬಿಡಿಸಿಕೊಂಡಿದ್ದೆವು. ಆದರೆ ಮೂರು ದಿನಗಳಿಂದ ಬಸ್ ಬರ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಖಾಸಗಿ ಬಸ್ ಲಾಬಿಗೆ ಮಣಿದು ಕೆಎಸ್ಆರ್ಟಿಸಿ ಅಧಿಕಾರಿಗಳು ಬಸ್ಸನ್ನ ನಿಲ್ಲಿಸಿದ್ದಾರೆ,” ಎಂದು ಆರೋಪಿಸಿದರು.

ನಾವು ಹುಟ್ಟಿದಾಗಿನಿಂದಲೂ ಖಾಸಗಿ ಬಸ್ ನಮ್ಮೂರಿಗೆ ಬಂದಿರಲಿಲ್ಲ ಸರ್ಕಾರಿ ಬಸ್ ಸೇವೆ ಆರಂಭ ಗೊಂಡ ನಂತರ  ಈಗ ಇವತ್ತಿನಿಂದ ಖಾತೆಗೆ ಬರ್ತಾ ಇದೆ ಕಾರಣ. ಗ್ರಾಮಸ್ಥರು ತಕ್ಷಣ ಬಸ್ ಸೇವೆಯನ್ನು ಪುನರಾರಂಭಗೊಳಿಸಲು ಸಂಬಂಧಪಟ್ಟ ಇಲಾಖೆಯ ಗಮನ ಸೆಳೆದಿದ್ದಾರೆ.

“ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು,” ಎಂಬ ಬೇಡಿಕೆಯನ್ನು ಗ್ರಾಮಸ್ಥರು ಮುಂದಿಟ್ಟಿದ್ದಾರೆ.

- Advertisement -

Latest Posts

Don't Miss