ಚಿಕ್ಕಮಗಳೂರು : ರೌಡಿ ಶೀಟರ್ ಒಬ್ಬನನ್ನು ಬಂದಿಸಲು ಪೊಲೀಸರು ತೆರಳಿದ್ದ ವೇಳೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ಈ ಕುರಿತು ಪರಿಶೀಲನೆ ನಡೆಸಲು ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಸ್ಥಳಕ್ಕೆ ಆಗಮಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ತಾಲೂಕಿನ ಮಾಗಲು ಗ್ರಾಮದ ಎಂ.ಕೆ ಪೂರ್ಣೆಶ್ ಈ ಹಿಂದೆ ಹಲವು ಕೃತ್ಯಗಳನ್ನು ಎಸಗಿ ಪೊಲೀಸರಿಗೆ ಬೇಕಾಗಿದ್ದ ರೌಡಿಶೀಟರ್ ನನ್ನು ಬಂಧಿಸಲು ಪೊಲೀಸರು ತೆರಳಿದ್ದ ವೇಳೆ ಪೊಲೀಸ್ ಕಾನ್ಸಟೆಬಲ್ ಮಂಜುನಾಥ್ ಚಾಕುವಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ವೇಳೆ ಅವನ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಹಲ್ಲೆಗೊಳಗಾದ ಪೊಲೀಸ್ ಪೆದೆಯನ್ನು ಬಾಳೆಹೊನ್ನುರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಪರಾಧಗಳನ್ನು ಮಾಡಿ ತಲೆಮರೆಸಿಕೊಂಡಿದ್ದ ಪೂರ್ಣೆಶ್ ನಂತರ ಆತ ಮನೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಪೊಲೀಸರು ಮನೆಗೆ ತೆರಳಿ ಶರಣಾಗತವಾಗುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ರೌಡಿ ಶೀಟರ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಹೇಳಿದರು.
ಜೀನಿ ಜೀವನಕ್ಕೆ ಹೊಸ ಹುರುಪನ್ನು ಕೊಟ್ಟಿದೆ: ಇದು Jeeni ಸೇವಿಸಿದವರ ಮಾತು
ಸಾಮಾನ್ಯ ಸಭೆಯಲ್ಲಿ ಅಭಿವೃದ್ದಿ ಕುರಿತು ಚರ್ಚೆ; ಕಾಮಗಾರಿ ವಿಳಂಬಕ್ಕೆ ವಿರೋಧ ಪಕ್ಷ ಆಕ್ರೋಶ..!