ದುಡಿಯಲು ಮಡಿಕೇರಿಗೆ ಹೋದ ಮಕ್ಕಳು ಹೆಣವಾಗಿ ಮನೆಗೆ ಬಂದರು…!

www.karnatakatv.net : ಲಕ್ಷ್ಮೇಶ್ವರ: ಮಡಿಕೇರಿ ತಾಲೂಕಿನ ಚೇರಂಬಾಣೆ ಬಳಿಯ ರಸ್ತೆ ಕೆಲಸಮಾಡುತ್ತಿದ್ದಾಗ ಮಣ್ಣಿನ ಗುಡ್ಡ ಕುಸಿದು ಲಕ್ಷ್ಮೇಶ್ವರ ಪಟ್ಟಣದ ಯುವಕರಿಬ್ಬರು ಮೃತಪಟ್ಟಿದ್ದಾರೆ. ಲಕ್ಷ್ಮೇಶ್ವರ ಪಟ್ಟಣದ ಇಂದಿರಾನಗರ ನಿವಾಸಿಗಳಾದ ಸಂತೋಷ ಬಂಡಾರಿ (27) ಹಾಗೂ ಪ್ರವೀಣ್ ಮಾವಿನಕಾಯಿ (21) ಮೃತರು.  ರಸ್ತೆ ಕೆಲಸಕ್ಕೆ ಮಡಿಕೇರಿಗೆ ತೆರಳಿದ್ದರು. ಮಡಿಕೇರಿ ತಾಲೂಕಿನ ಚೆರಂಬಾಣೆಯ ಸಿದ್ಧಾರೂಡ ಮಠದ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಮಿಕ್ಸರ್ ಲಾರಿ ಮೂಲಕ ಕಾಂಕ್ರಿಟ್ ಸುರಿಯುತ್ತಿರುವ ವೇಳೆ 20 ಅಡಿ ಎತ್ತರ ದಿಂದ ಲಾರಿ ಸಮೇತ ಗುಡ್ಡದ ಮಣ್ಣು ಕುಸಿದು ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಕೆಳಗೆ ಕೆಲಸ ಮಾಡುತ್ತಿದ್ದ ಏಳು ಜನ ಮಣ್ಣಿನಡಿಸಿಲುಕಿದ್ದಾರೆ. ಅದರಲ್ಲಿ 5 ಜನರನ್ನು ರಕ್ಷಿಸಲಾಗಿದೆ. ಸತತ ಮಳೆ ಆಗುತ್ತಿರುವದರಿಂದ ಮಣ್ಣು ಕುಸಿದಿದೆ ಎನ್ನಲಾಗಿದೆ. ಮೃತ ಸಂತೋಷ ಹಾಗೂ ಪ್ರವೀಣ ಪಾಲಕರಿಗೆ ಒಬ್ಬೊಬ್ಬರೇ ಪುತ್ರರಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ‌.

About The Author