ಅಂತರಾಷ್ಟ್ರೀಯ ಸುದ್ದಿ: ಚೀನಾದ ವಿದೇಶಾಂಗ ಸಚಿವ ಕಾಣಿಯಾಗಿದ್ದಾರೆ ಕಳೆದ ಒಂದು ತಿಂಗಳಿನಿಂದಲೂ ಅವರು ಕಾಣೆಯಾಗಿದ್ದರು ಚೀನಾ ಸರ್ಕಾರ ಮಾತ್ರ ಇದಕ್ಕೆ ಉತ್ತರ ನೀಡುತ್ತಿಲ್ಲ.ಚೀನಾದಲ್ಲಿ ಇದಕ್ಕಿಂತ ಮುಂಚೆ ಹಲವಾರು ಸಿನಿಮಾ ನಟರು ರಾಜಕಾರಣಿಗಳು ಉದ್ಯಮಿಗಳು ಕಾಣೆಯಾಗಿದ್ದರ ಬಗ್ಗೆ ವರಧಿಗಳಾಗಿದ್ದವು, ಆದರೆ ಈಗ ಚೀನಾ ವಿಧೇಶಾಂಗ ಸಚಿವರೇ ಕಾಣಿಯಾಗಿದ್ದಾರೆ. ಹಾಗಿದ್ದರೆ ಅವರು ಎಲ್ಲಿ ಹೋದರು ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ.
ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರು ಕೊನೆಯದಾಗಿ ಜೂನ್ 25 ರಂದು ರಷ್ಯಾದ ಉಪ ವಿದೇಶಾಂಗ ಸಚಿವ ರುಡೆಂಕೋ ಆಂಡ್ರೆಯೂರಿವಿಚ್ ಅವರೊಂದಿಗೆ ಕೊನೆಯದಾಗಿ ಸಭೆಯಲ್ಲಿ ಕಾಣಿಸಿಕೊಂಡಿದ್ದರು.
ಕ್ವಿನ್ ಗ್ಯಾಂಗ್ (57) ಖ್ಯಾತ ಟಿವಿ ನಿರೂಪಕಿ ಫೂ ಜಿಯೀಟಿಯೆನ್ (40) ಅವರೊಂದಿಗೆ ಸಂಬಂಧವನ್ನು ಹೊಂದಿದ್ದಾರೆ ಎಂದು ಸುದ್ದಿ ಹರಡಿರುವುದರಿಂದ ಗ್ಯಾಂಗ್ ಅವರನ್ನು ವಿದೇಶಾಂಗ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂಬ ಸುದ್ದಿ ಹರಿಡಿದಾಡುತ್ತಿದೆ.
ಟಿವಿ ನಿರೂಪಕಿ ಜಿಯೋಟಿಯನ್ ಗ್ಯಾಂಗ್ ಸಂದರ್ಶನದ ಮಾಡಿದ್ದರು ನಂತರ ಇಬ್ಬರು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇವರಿಬ್ಬರು ಸಂಬಂಧ ಮಾರ್ಚ 2022 ರಲ್ಲಿ ಪ್ರಾರಂಭವಾಗಿದೆ ಈಗ ಒಂದು ಮಗುವು ಇದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
Ever Grand: ಚೀನಾ ಸರ್ಕಾರದ ನಿಯಮದಿಂದ ರಿಯಲ್ ಎಸ್ಟೇಟ್ ಅಲ್ಲೋಲ ಕಲ್ಲೋಲ..!