Web News: ಯ್ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, 2017ರಲ್ಲಿ ವಿದೇಶದಲ್ಲಿ ನೆಲೆಯೂರಬೇಕೆಂದು ನಿರ್ಧರಿಸಿ, ಭಾರತದಿಂದ ಚೀನಾಗೆ ಹೋಗಿದ್ದರು. ಅದಾದ ಬಳಿಕ ಅಲ್ಲಿ ಏನೇನಾಯಿತು ಅನ್ನೋ ಬಗ್ಗೆ ವಿವರಿಸಿದ್ದಾರೆ.
ಭಾರತದಲ್ಲಿ 75ರಿಂದ 80 ಲಕ್ಷದವರೆಗೆ ಫೀಸ್ ಕಟ್ಟಿ ನಾವು ಓದಬಹುದಾದ ವಿದ್ಯಾಭ್ಯಾಸವನ್ನು ಚೀನಾದಲ್ಲಿ 20ರಿಂದ 25 ಲಕ್ಷದಲ್ಲಿ ಓದಬಹುದು. ಹಾಗಾಗಿ ಅಲ್ಲಿಗೆ ಹೆಚ್ಚು ಜನ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಾರೆ. ಅದೇ ರೀತಿ ನಾನು ಕೂಡ ವಿದ್ಯಾಭ್ಯಾಸ ಮುಂದುವರಿಸಲು ನಾನು ಚೀನಾಗೆ ಹೋಗಿದ್ದೆ. ನನ್ನ ವಿದ್ಯಾಭ್ಯಾಸಕ್ಕಾಗಿ ಅಪ್ಪ ಸುಮಾರು ಸಾಲ ಮಾಡಿದ್ದರು ಎಂದು ಹೇಳ್ತಾರೆ ಸಾಹಿಲ್.
ಆದರೆ ಏಜನ್ಸಿ ಥ್ರೂ ಹೋದಾಗ ಕೆಲವರು ಮೋಸ ಮಾಡುತ್ತಾರೆ. ಅದೇ ರೀತಿ ಸಾಹಿಲ್ ಕೂಡ ಏಜೆನ್ಸಿ ಥ್ರೂ ಓದುವುದಕ್ಕೆ ಹೋಗಿದ್ದರು. ಆದರೆ ಅವರು, ಅಲ್ಲಿನ ಖರ್ಚು ವೆಚ್ಚ, ಫೀಸ್ ಎಲ್ಲವನ್ನು ಡಬಲ್ ಪಡೆದು ಅವರು ಸಾಹಿಲ್ ಅವರಿಗೆ ಮೋಸ ಮಾಡಿದ್ದರು ಎಂದು ಸಾಹಿಲ್ ಬೇಸರ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




