www.karnatakatv.net : ಪೂರ್ವ ಮತ್ತು ಉತ್ತರ ಲಡಾಖ್ ಪ್ರದೇಶದಲ್ಲಿ ಗಣನೀಯ ಪ್ರಮಾಣದ ಚೀನಾ ಸೇನೆಯನ್ನು ನಿಯೋಜನೆ ಮಾಡಲಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ ಹೇಳಿದ್ದಾರೆ.
ಚೀನಾ ನಿಯೋಜನೆಯಲ್ಲಿ ಹೆಚ್ಚಳ ಕಂಡುಬಂದಿದ್ದಲ್ಲಿ, ನಾವು ಕಾಳಜಿ ವಹಿಸಬೇಕಾದ ವಿಷಯವಾಗಿದೆ ಎಂದು ನಾರವಾನೆ ಲಡಾಕ್ ನಲ್ಲಿ ಹೇಳಿದ್ದಾರೆ. 152ನೇ ಗಾಂಧಿಯವರ ಜನ್ಮದಿನದ ಹಿನ್ನೆಲೆ ಅ.2 ರಂದು ವಿಶ್ವದ ಅತಿ ದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಸ್ಥಾಪಿಸಿದ ಲೇಹ್ ಮಟ್ಟಣದಲ್ಲಿ ನಾರವಾನೆ ಭೇಟಿ ನೀಡಿದ್ದರು.
ಗಡಿ ಉದ್ವಿಗ್ನತೆಯನ್ನು ಹೊಂದಿರುವ ಎತ್ತರ ಪ್ರದೇಶದಲ್ಲಿ ಸೇನಾಬಲವು ಮೊದಲಿನಂತಿದ್ದು, ಭಾರತೀಯ ಭೂಪ್ರದೇಶಗಳ ಮೇಲೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರು ನಿಯಂತ್ರಣ ಸಾಧಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ನಾರವಾನೆ ದೃಢವಾಗಿ ಉತ್ತರಿಸಿದ್ದಾರೆ. ಭಾರತೀಯ ಗಡಿಯ ಮೇಲೆ ಚೀನಾ ಯಾವುದೇ ರೀತಿ ನಿಯಂತ್ರಣಕ್ಕೆ ತೆಗೆದುಕೊಂಡಿಲ್ಲ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾತನ್ನು ಅವರು ಉಲ್ಲೇಖಿಸುತ್ತಾರೆ.




