Monday, December 23, 2024

Latest Posts

ಚೀನಾದಲ್ಲಿ ಕೊವಿಡ್ ಹೆಚ್ಚಳಕ್ಕೆ ಪಟ್ಟಣ ತೊರೆಯುತ್ತಿರುವ ಜನರು!

- Advertisement -

international news:

ಚೀನಾದಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಮಹಾಮಾರಿ ಹೆಚ್ಚುತ್ತಲೇ ಇದೆ.  ಕೋವಿಡ್  ವಿರುದ್ಧ ಹೋರಾಡುತ್ತಿರುವ ಅಲ್ಲಿನ ಜನರು ಪಟ್ಟಣಗಳನ್ನ ಬಿಟ್ಟು ಲಕ್ಷಾಂತರ ಜನ ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇನ್ನೂ ಈ ಬಗ್ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೊರೊನಾ ವೈರಸ್ ಹೆಚ್ಚುತ್ತಿರುವುದರಿಂದ ಅಲ್ಲಿನ ಪರಿಸ್ಥಿತಿ ಕಳವಳ ವ್ಯಕ್ತಪಡಿಸಿದ್ದಾರೆ. ಚೀನಾದ ಗ್ರಾಮಾಂತರದಲ್ಲಿನ ವೈರಸ್ ಪರಿಸ್ಥಿತಿಯ ಬಗ್ಗೆ ತಾನು “ಚಿಂತಿತನಾಗಿದ್ದೇನೆ” ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.

“ದೇಶವು ತನ್ನ ಕೋವಿಡ್ -19 ಪ್ರತಿಕ್ರಿಯೆ ಕ್ರಮಗಳನ್ನು ಸರಿಹೊಂದಿಸಿದ ನಂತರ ಅವರು ಪ್ರಾಥಮಿಕವಾಗಿ ಗ್ರಾಮೀಣ ಪ್ರದೇಶಗಳು ಮತ್ತು ಗ್ರಾಮೀಣ ನಿವಾಸಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದು ಕ್ಸಿ ಹೇಳಿದರು” ಎಂದು ರಾಜ್ಯ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ವೈರಸ್ಗೆ ತುತ್ತಾಗುವವರೆಗ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಕ್ಸಿ ಜಿನ್‌ಪಿಂಗ್ ಸೂಚನೆ ನೀಡಿದ್ದಾರೆ. ಸಾಂಕ್ರಾಮಿಕ ರೋಗ ತಡೆಗಟ್ಟಲು ನೂತನ ಕ್ರಮವಹಿಸಲು ಆಗ್ರಹಿಸಿದ್ದಾರೆ.

ಕೊರೊನಾ ಕೊಂಚ ಮಟ್ಟಿಗೆ ಇಳಿಕೆ ಕಾಣುತ್ತಿರುವ ಏಕಾಏಕಿ ಕಠಿಣ ಕ್ರಮಗಳನ್ನ ಹಿಂತೆಗೆದುಕೊಂಡಿದ್ದು, ವಿದೇಶಿ ಪ್ರಯಾಣಕ್ಕೆ ಅವಕಾಶ ಮಾಡಿದ್ದು ಸೋಂಕು ಇನ್ನಷ್ಟು ಹೆಚ್ಚಲು ಕಾರಣವಾಗಿದೆ. ಬುಧವಾರವೊಂದರಲ್ಲೇ. 30.2 ಮಿಲಿಯನ್ ರಾಷ್ರವ್ಯಾಪಿ ಪ್ರಯಾಣ ಮಾಡಿರುವ ಬಗ್ಗೆ ವರದಿಯಾಗಿದೆ.

ವಿಶ್ವದ ಹಿರಿಯ ಮಹಿಳೆ ಇನ್ನಿಲ್ಲ..!

ವಿದೇಶದಲ್ಲಿ ಹಿಂದೂ ದೇವಾಲಯಗಳು ದ್ವಂಸ

ವಿಯೆಟ್ನಾಂ ಅಧ್ಯಕ್ಷ ರಾಜೀನಾಮೆ..!

- Advertisement -

Latest Posts

Don't Miss