Thursday, December 12, 2024

Latest Posts

ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿ ಹತ್ಯೆ!

- Advertisement -

National story ;

ಉತ್ತರ ಪ್ರದೇಶದ ಭದೋಹಿಯಲ್ಲಿ ಯುವಕನೊಬ್ಬ 15 ವರ್ಷದ ಬಾಲಕಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. 15 ವರ್ಷದ ಬಾಲಕಿಗೆ ಆತ ಪ್ರೇಮ ನಿವೇದನೆ ಮಾಡಿದ್ದು, ಆಕೆ ಪ್ರೀತಿಯನ್ನು ನಿರಾಕರಿದ್ದಳು. ಇನ್ನೂ ಇದೇ ಕಾರಣದಿಂದ ಆತ ಬಾಲಕಿಯನ್ನ ಗುಂಡಿಟ್ಟು ಕೊಂದಿದ್ದಾನೆ  ಎಂದು ಪೊಲೀಸರು ತಿಳಿಸಿದ್ದಾರೆ. ಅನುರಾಧಾ ಬಿಂದ್ ನಿನ್ನೆ ತನ್ನ ಸೋದರಸಂಬಂಧಿ ನಿಶಾ ಜೊತೆ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಿಂದ ಮನೆಗೆ ಮರಳುತ್ತಿದ್ದಾಗ ಆರೋಪಿ ಅರವಿಂದ್ ವಿಶ್ವಕರ್ಮ (22) ಆಕೆಯ ತಲೆಗೆ ಗುಂಡು ಹಾರಿಸಿದ್ದಾನೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಹದಿಹರೆಯದ ಯುವತಿಗೆ ಪ್ರಪೋಸ್ ಮಾಡಿದ್ದು, ಆದರೆ ಆಕೆ ನಿರಾಕರಿಸಿದ್ದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಂತರ ಆಕೆಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ. ಆರೋಪಿ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ತೊರೆದ ಕ್ಷಣಾರ್ಧದಲ್ಲೇ ಬಿಜೆಪಿ ಸೇರಿದ ಮಾಜಿ ಹಣಕಾಸು ಸಚಿವ..?!

 

ಕೇವಲ ರೂ 20 ಜಮ ಮಾಡಿ 2 ಲಕ್ಷದ ವರೆಗೆ ವಿಮಾ ಪಾಲಿಸಿ ಪಡೆಯಿರಿ.

ಗಂಗಾ ವಿಲಾಸ್ ಕ್ರೂಸ್ ನಲ್ಲಿ ಅಡಚಣೆ , ಪ್ರಯಾಣಿಕರು ಪರದಾಟ

- Advertisement -

Latest Posts

Don't Miss