Sunday, April 13, 2025

Latest Posts

ಬರಕ್ಕೆ ಈರುಳ್ಳಿ ಬೆಳೆ ಕುಂಠಿತ; ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ, ರೈತನ ಪಾಲಿಗೂ ಕಣ್ಣೀರುಳ್ಳಿ

- Advertisement -

ಚಿತ್ರದುರ್ಗ: ಭೀಕರ ಬರಗಾಲದ ಪರಿಣಾಮ ಈರುಳ್ಳಿ ಬೆಳೆ ಹಾಳಾಗಿದ್ದರೆ, ಇನ್ನೊಂದೆಡೆ ಬೆಲೆ ಗಗನಕ್ಕೇರಿದೆ. ಇದರಿಂದ ರೈತ ಕಂಗಾಲಾಗಿದ್ದಾನೆ. ಹೌದು, ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 40ಸಾವಿರ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗುತ್ತದೆ.

ಬರಗಾಲದ ಪರಿಣಾಮ ಈ ವರ್ಷ 18.220 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಆಗಿದೆ. ಆದ್ರೆ, ಬರದ ಪರಿಣಾಮ ಈರುಳ್ಳಿ ಮತ್ತು ವಿಫಲವಾಗಿದೆ. ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಟ್ಟರೂ ಸಹ ಲೋಡ್ ಶೆಡ್ಡಿಂಗ್ನಿಂದಾಗಿ ಈರುಳ್ಳಿ ಬೆಳೆ ಬಹುತೇಕ ವಿಫಲವಾಗಿದೆ.

ಗಗನಕ್ಕೇರಿದ ಈರುಳ್ಳಿ ಬೆಲೆ:
ಇದೇ ಸಂದರ್ಭದಲ್ಲಿ ಕೆ.ಜಿಗೆ 20 ರಿಂದ 30 ರೂಪಾಯಿಯಿದ್ದ ಈರುಳ್ಳಿ ಬೆಲೆ ಈಗ 50 ರಿಂದ 60ರೂಪಾಯಿಗೆ ಏರಿಕೆ ಆಗಿದೆ. ಹೀಗಾಗಿ, ಒಂದು ಕಡೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಮತ್ತೊಂದು ಕಡೆ ಬೆಳೆ ಹಾನಿಯಾದ ವೇಳೆಯೇ ಬೆಲೆ ಏರಿಕೆ ಆಗಿದ್ದು, ರೈತರು ಕೈಕೈ ಹಿಚುಕಿಕೊಳ್ಳುವಂತಾಗಿದೆ. ಇನ್ನು ಈರುಳ್ಳಿ ಬಂಪರ್ ಬೆಳೆ ತೆಗೆದು ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ರೈತರಿಗೆ ಶಾಕ್ ಆಗಿದೆ. ಈರುಳ್ಳಿ ಬೆಳೆಯನ್ನೇ ಪ್ರಧಾನವಾಗಿ ಬೆಳೆಯುವ ಚಿತ್ರದುರ್ಗ ಜಿಲ್ಲೆಯ ರೈತರು ಧರ್ಮ ಸಂಕಟಕ್ಕೆ ಸಿಲುಕುವಂತಾಗಿದೆ.ಬೆಳೆ ಹಾನಿಯಾದ ಸಂದರ್ಭದಲ್ಲಿ ಈರುಳ್ಳಿಗೆ ಭಾರೀ ಬೇಡಿಕೆ ಬಂದಿರುವುದು ರೈತರನ್ನು ಮತ್ತಷ್ಟು ಕುಗ್ಗುವಂತಾಗಿಸಿದೆ. ಹೀಗಾಗಿ, ಸರ್ಕಾರ ಈರುಳ್ಳಿ ಬೆಳೆಗಾರರತ್ತ ಗಮನಹರಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂಬುದು ರೈತರು ಆಗ್ರಹಿಸಿದ್ದಾರೆ.

ಐಎಎಸ್‌ ಅಧಿಕಾರಿಯ ದೌಲತ್ತು! ಜನಸ್ಪಂದನದಲ್ಲಿ ಮೊಬೈಲ್‌ ಆಟ; ಕೇಳೋರಿಲ್ಲ ಜನರ ಸಂಕಟ

ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದಲ್ಲಿ ಸಚಿವರ ಹಸ್ತಕ್ಷೇಪ: ಸತೀಶ ಜಾರಕಿಹೊಳಿ ವಿರುದ್ಧ ರಾಜ್ಯಪಾಲರಿಗೆ ದೂರು

 

Chilli: ಮೆಣಸಿನಕಾಯಿ ಬೆಳೆ ಉಳಿಸಲು ಹೊಸ ಮಾರ್ಗ ಕಂಡುಕೊಂಡ ಕೊಪ್ಪಳದ ರೈತ!

- Advertisement -

Latest Posts

Don't Miss