Political news: ನಗರಸಭೆಯಲ್ಲಿ 17 ಸದಸ್ಯರು ಬಿಜೆಪಿ ಬೆಂಬಲಿತರಿದ್ದರೂ, ಚಿತ್ರದುರ್ಗ ನಗರಸಭೆ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮತದಾನದ ವೇಳೆ ನಾಲ್ಕು ಜನ ಬಿಜೆಪಿ ಸದಸ್ಯರು ವಿಪ್ ಉಲ್ಲಂಘಿಸಿದ ಹಿನ್ನೆಲೆ, ಬಿಜೆಪಿ ಸೋಲನುಭವಿಸಬೇಕಾಯಿತು. ಅಲ್ಲದೇ, ಮೈತ್ರಿ ಪಕ್ಷ ಜೆಡಿಎಸ್ ಬೆಂಬಲಿಗರು ಕೂಡ ಬಿಜೆಪಿಗೆ ಕೈಕೊಟ್ಟ ಕಾರಣ, ಬಿಜೆಪಿ ಗೆಲ್ಲಲು ಸಾಧ್ಯವಾಗಲಿಲ್ಲ.
ಅಧ್ಯಕ್ಷ ಸ್ಥಾನಕ್ಕೆ ಬಿ.ಎಂ.ಸುಮಿತಾ ಜೊತೆಗೆ 32ನೇ ವಾರ್ಡ್ ಸದಸ್ಯೆ ಎಸ್.ಸಿ.ತಾರಕೇಶ್ವರಿ, ನಾಮಪತ್ರ ಸಲ್ಲಿಸಿದ್ದರು. ಸುಮಿತಾ ತಾರಕೇಶ್ವರಿಗಿಂತ ಹೆಚ್ಚು ಮತ ಗಳಿಸಿ, ಗೆದ್ದರೆ, ತಾರಕೇಶ್ವರಿ ಸೋಲನ್ನಪ್ಪಿದ್ದಾರೆ.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀದೇವಿ ಜೊತೆ ರೋಹಿಣಿ ಎಂಬುವವರು ನಾಮಪತ್ರ ಸಲ್ಲಿಸಿದ್ದರು. ಶ್ರೀದೇವಿ 22 ಮತ ಪಡೆದು ಗೆದ್ದರೆ, ರೋಹಿಣಿ 13 ಮತ ಪಡೆದು ಸೋಲನ್ನಪ್ಪಿದ್ದಾರೆ.
ಇನ್ನು ಫಲಿತಾಂಶ ಬಂದ ಬಳಿಕ ಮಾತನಾಡಿದ ಶಾಸಕ ರವೀಂದ್ರ, ಸುಮಿತ್ರಾ ಮತ್ತು ಶ್ರೀದೇವಿ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಐತಿಹಾಸಿಕ ನಗರದ ಅಭಿವೃದ್ಧಿ ಪರವಾಗಿ, ಕೆಲಸ ಮಾಡುತ್ತಾರೆಂಬ ವಿಶ್ವಾಸ ನನಗಿದೆ ಎಂದು ರವೀಂದ್ರ ಹೇಳಿದ್ದಾರೆ.
ನಗರದ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುತ್ತೇನೆ. ಚೆನ್ನಾಗಿ ಕಾರ್ಯನಿರ್ವಹಿಸಿ, ಅಭಿವೃದ್ಧಿ ಮಾಡುತ್ತೇನೆ. ಎಲ್ಲರಿಗೂ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು, ಅದಕ್ಷ್ಯೆ ಸುಮಿತ್ರಾ ಹೇಳಿದ್ದಾರೆ.




