Monday, December 23, 2024

Latest Posts

ಚಿತ್ತಾರ ಅವಾರ್ಡ್ ದರ್ಶನ್ ಗೆ ಅರ್ಪಿಸಿದ ಸ್ಟಾರ್ ನಟಿ..!

- Advertisement -

Film News:

ಸಾಮಾನ್ಯವಾಗಿ  ನಟ ನಟಿಯರಿಗೆ ಅವಾರ್ಡ್ ಬಂದ್ರೆ ಆ ಅವಾರ್ಡನ್ನು  ತಮ್ಮ ಮನೆಯವರಿಗೋ ದೇವರಿಗೋ ಅರ್ಪಿಸುತ್ತಾರೆ ಆದರೆ ಇಲ್ಲಿ  ಒಬ್ಬರು ನಟಿ  ತಮಗೆ ಬಂದಂತಹ  ಅವಾರ್ಡನ್ನು ಡಿ ಬಾಸ್ ದರ್ಶನ್ ಗೆ ಅರ್ಪಿಸಿದ್ದಾರೆ. ನಿಜಕ್ಕೂ  ಇದು ದರ್ಶನ್ ಮೇಲಿನ ಅಭಿಮಾನವನ್ನು  ದುಪ್ಪಟ್ಟು ಮಾಡುತ್ತೆ. ಹಾಗಿದ್ರೆ ಯಾರಾ ನಟಿ ..?  ಯಾಕೀ ಡೆಡಿಕೇಟ್ ಹೇಳ್ತೀವಿ ಈ ಸ್ಟೋರಿಯಲ್ಲಿ…

ಡಿ ಬಾಸ್ ದರ್ಶನ್ ಅಂದ್ರೆ  ಕರುನಾಡ ಸಾಮಾನ್ಯ ಜನರಿಗೆ ಮಾತ್ರವಲ್ಲ ಸ್ಟಾರ್ ಗಳು  ಕೂಡಾ  ಅವರನ್ನು ತುಂಬಾ ಇಷ್ಟ ಪಡ್ತಾರೆ ಕೆಲವರು ಅವರ ಸಿನಿಮಾ  ಜೀವನವನ್ನು  ಅನುಸರಿಸಿದ್ರೆ ಇನ್ನು  ಕೆಲವರು ವೈಯಕ್ತಿಕ ಬದುಕಿನ ದರ್ಶನ್ ಸ್ಟೈಲ್  ನ್ನು  ಬಹಳವಾಗಿ ಅನುಕರಣೆ ಮಾಡ್ತಾರೆ.  ಅದೆಷ್ಟೋ  ಬೆಳೆಯುತ್ತಿರೋ  ನಟ ನಟಿಯರಿಗೆ ದರ್ಶನ್ ಪ್ರೋತ್ಸಾಹ  ನೀಡ್ತಾರೆ ಅವರನ್ನು  ಬೆಳೆಸ್ತಾರೆ. ಈ ಗುಣದಿಂದಲೇ ಸ್ಟಾರ್ಸ್ ಕೂಡಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಆರಾಧಿಸ್ತಾರೆ.

ಇತ್ತೀಚೆಗಷ್ಟೇ ಸಿನಿ ನಟ ನಟಿಯರಿಗೆ ಚಿತ್ತಾರ ಮ್ಯಾಗಜಿನ್ ಕೆಲವೊಂದು ಅವಾರ್ಡ್  ನೀಡುವ ಕಾರ್ಯಕ್ರಮ  ಹಮ್ಮಿಕೊಂಡಿತ್ತು. ಈ ಚಿತ್ತಾರ ಅವಾರ್ಡ್  ಗೆ ಅನೇಕ ಸ್ಟಾರ್ಸ್  ಬಂದಿದ್ದು  ಕಾರ್ಯಕ್ರಮಕ್ಕೆ  ಬಹಳಷ್ಟು ಮೆರಗು ನೀಡಿತ್ತು.ಕಾರ್ಯಕ್ರಮದ ನಿರೂಪಣೆಯನ್ನು ನಿರಂಜನ್ ದೇಶ್ ಪಾಂಡೆ ಬಹಳ ಅದ್ಭುತ ವಾಗಿ ನೆರವೇರಿಸಿದ್ರು. ಅಷ್ಟಕ್ಕೂ ದರ್ಶನ್  ಹಾಗೂ ಚಿತ್ತಾರ ಅವಾರ್ಡ್ ಗೆ ಏನ್ ಸಂಬಂಧ ಎಂಬ ಪ್ರಶ್ನೆ ಮೂಡಬಹುದು.  ಹೌದು ನಿಮ್ಮ ಪ್ರಶ್ನೆ  ಸರಿಯಾಗಿದೆ. ದರ್ಶನ್ ಹಾಗು ಚಿತ್ತಾರ ಅವಾರ್ಡ್ ಗೆ ಸಂಬಂಧ ಇದೆ. ಅದುವೇ ಅಭಿಮಾನದ ಸಂಬಂಧ. ಸ್ಟಾರ್ ನಟಿ ತನಗೆ ಸಿಕ್ಕಿದಂತಹ ಅವಾರ್ಡ್ ನ್ನು ಡಿ  ಬಾಸ್ ಗೆ ಅರ್ಪಿಸಿದ್ದಾರೆ.

ಹೌದು ಇತ್ತೀಚೆಗೆ ಸೀರಿಯಲ್  ನಟ ನಟಿಯರು ಬಹಳಷ್ಟು ಹೆಸರುವಾಸಿಯಾಗಿದ್ಧಾರೆ. ಅವರಲ್ಲಿ ಒಬ್ಬರು  ಮೇಘಾ ಶೆಟ್ಟಿ. ಜೊತೆಜೊತೆಯಲಿ ಸೀರಿಯಲ್  ಮೂಲಕ  ಕರುನಾಡಿನ ಮನೆಮಗಳಾದವರು. ಇದೀಗ ಚಿತ್ತಾರ ಅವಾರ್ಡ್  ಕೂಡಾ ಪಡೆದುಕೊಂಡು ಸೈ ಎನಿಸಿಕೊಂಡಿದ್ದಾರೆ.

ಮೇಘಾ ಶೆಟ್ಟಿ ಮೊದಲಿನಿಂದಲೂ  ದರ್ಶನ್ ಫ್ಯಾನ್.ಒಂದೊಮ್ಮೆ ದರ್ಶನ್ ಜೊತೆ ಸಿನಿಮಾ ಮಾಡುವುದಾಗಿ  ಸುದ್ದಿಯಲ್ಲಿದ್ರು. ದರ್ಶನ್ ಜೊತೆಗಿನ ಫೋಟೋ ಹಂಚಿ ಅಭಿಮಾನಿಗಳಿಗೆ ಸರ್ಪೈಸ್ ನೀಡಿದ್ರು. ಇದೀಗ ಮತ್ತೆ  ದರ್ಶನ್ ಅಭಿಮಾನಿ ಎಂದು ಪ್ರೂವ್ ಮಾಡಿದ್ದಾರೆ.

ಚಿತ್ತಾರ ಅವಾರ್ಡ್  ಸಿಕ್ಕಂತಹ ಸಂದರ್ಭದಲ್ಲಿ ನಿರಂಜನ್ ಮೇಘಾ ಶೆಟ್ಟಿಯನ್ನು ಯಾರಿಗೆ ಈ ಅವಾರ್ಡ್ ಡೆಡಿಕೇಟ್ ಮಾಡ್ತೀರಾ ಎಂದು ಕೇಳಿದಾಗ ಮೇಘಾ ಒಂದೇ ಬಾರಿಗೆ  ದರ್ಶನ್ ಸರ್ ಗೆ ಎಂದು ಹೇಳಿ  ಬಿಟ್ರು. ಯಾಕೆ ಎಂದು  ಮರು ಪ್ರಶ್ನೆ ಮಾಡಿದಾಗ ನಾನು ಅವರ ಫ್ಯಾನ್ ನನಗೆ  ಅವರೆಂದ್ರೆ ಇಷ್ಟ ಎಂಬುವುದಾಗಿ ಹೇಳಿದ್ರು.

ಇಲ್ಲಿ ಮತ್ತೆ ಮೇಘಾ ಶೆಟ್ಟಿ ದರ್ಶನ್ ಅವರ ಅಭಿಮಾನಿ   ಎಂಬುವುದನ್ನು ಸಾಬೀತು ಪಡಿಸಿದ್ದಾರೆ. ಜೊತೆಗೆ ನನ್ನ ತಂದೆತಾಯಿ ಕರುನಾಡಿನ ಜನತೆಗೂ  ಈ ಅವಾರ್ಡ್ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ. ಹಾಗು ರಮ್ಯಾ ಅವರ ಅಭಿಮಾನಿ ಕೂಡಾ ಎಂಬುವುದಾಗಿಯೂ  ಹೇಳಿದ್ರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೇನೆ ಹಾಗೆ ತಮ್ಮಸಿಂಪ್ಲಿಸಿಟಿ  ಮೂಲಕ ಎಲ್ಲರಿಗೂ ಇಷ್ಟ ಆಗ್ತಾರೆ. ಹಾಗೆ ಸ್ಟಾರ್ ನಟ ನಟಿಯರು ಕೂಡಾ ದರ್ಶನ್ ಅವರನ್ನು ಆರಾಧಿಸುತ್ತಾರೆ ಅನ್ನೋದಕ್ಕೆ ಈ ಡೆಡಿಕೇಟೆಡ್ ಅವಾರ್ಡ್ ಸಾಕ್ಷಿಯಾಗುತ್ತೆ.

ಸಾನ್ಯಾ ನನ್ನ ಲವರ್ ಎಂದ ರಾಕೇಶ್..! ಬಿಗ್ ಬಾಸ್ ನಲ್ಲಿ ಹೊಸ ಲವ್ ಸ್ಟೋರಿ ಶುರೂ..!

ಗನ್ ಹಿಡಿದ ಯಶ್..! ಮುಂದಿನ ಚಿತ್ರದ ಸೂಚನೆ ನೀಡಿದ್ರಾ ರಾಕಿಭಾಯ್…!

ಸೋನು ಗೌಡ ದರ್ಶನ್ ಬಗ್ಗೆ ಹೀಗಾ ಹೇಳೋದು..?!

- Advertisement -

Latest Posts

Don't Miss