ಹೊಸದಿಲ್ಲಿ: ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್‍ನ (ಎಐಎಫ್ಎಫ್)ನೂತನ ಅಧ್ಯಕ್ಷರಾಗಿ ಕಲ್ಯಣ್ ಚೌಬೆ ಆಯ್ಕೆಯಾಗಿದ್ದಾರೆ. 85 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಜಿ ಆಟಗಾರರೊಬ್ಬರು ಮಂಡಳಿಯ ಸಾರಥಿಯಾಗಿದ್ದಾರೆ.
45 ವರ್ಷದ ಮಾಜಿ ಗೋಲ್ ಕೀಪರ್ ಕಲ್ಯಾಣ್ ಚೌಬೆ ಮಾಜಿ ನಾಯಕ ಭುಟಿಯಾ ವಿರುದ್ಧ 33-1 ಅಂತರದಿಂದ ಗೆದ್ದರು. ರಾಜ್ಯ ಅಸೋಸಿಯೇಷನ್‍ಗಳಿಂದ ಚುನಾವಣೆಯಲ್ಲಿ ಒಟ್ಟು 34 ಪ್ರತಿನಿಗಳಿದ್ದರು.
ಸಿಕ್ಕಿಂನ ಭೈಚುಂಗ್ ಭೂಟಿಯಾ ಮಾಜಿ ತಾರಾ ನಾಯಕರಾಗಿದ್ದರಿಂದ ಎಐಎಫ್ಎಫ್ ಚುನಾವಣೆ ರಂಗೇರಿತ್ತು.
ಮಾಜಿ ಗೋಲ್ ಕೀಪರ್ ಚೌಬೆ ರಾಜಕೀಯ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಪ.ಬಂಗಾಳದ ಕೃಷ್ಣರಾಜ ಸಾಗರದಿಂದ ಜನಪ್ರತಿನಿಯಾಗಿದ್ದಾರೆ. ಭಾರತ ಹಿರಿಯರ ತಂಡದಲ್ಲಿದ್ದರೂ ಒಮ್ಮೆಯೂ ಕೂಡ ಆಡುವ ಬಳಗದಲ್ಲಿ ಸ್ಥಾನ ಪಡೆದಿಲ್ಲ.
ವಿವಿಧ ವಯಸ್ಸಿನ ಗುಂಪಿನಲ್ಲಿ ಭಾರತ ತಂಡದ ಪರ ಆಡಿದ್ದಾರೆ.
ಮೋಹನ್ ಬಗನ್ ಮತ್ತು ಈಸ್ಟ್ ಬಂಗಾಳ ತಂಡದ ಪರ ಗೋಲ್ ಕೀಪರ್ ಆಗಿ ಆಡಿದ್ದಾರೆ.
ಒಂದು ಕಾಲದಲ್ಲಿ ಭುಟಿಯಾ ಮತ್ತು ಚೌಬೆ ಈಸ್ಟ್ ಬಂಗಾಳ ತಂಡದಲ್ಲಿ ಸಹ ಆಟಗಾರರಾಗಿದ್ದರು.
ಖಜಾಂಚಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಅರುಣಾಚಲ ಪ್ರದೇಶದ ಕಿಪಾ ಅಜಯ್ ಆಂಧ್ರ ಪ್ರದೇಶದ ಗೋಪಾಲ ಕೃಷ್ಣ ಕೋಸರಾಜು ಅವರನ್ನು 32 -1 ಮತಗಳಿಂದ ಸೋಲಿಸಿದರು. ಕಾರ್ಯನಿರ್ವಹಕ ಸಮಿತಿಗೆ ಎಲ್ಲಾ 14 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಹ್ಯಾರಿಸ್ ಆಯ್ಕೆ
ಕರ್ನಾಟಕ ಫುಟ್ಬಾಲ್ ಅಸೋಸಿಯೇಷನ್‍ನ ಅಧ್ಯಕ್ಷ , ಹಾಲಿ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಮಂಡಳಿಯ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎದುರಾಳಿ ರಾಜಸ್ಥಾನದ ಮನವೇಂದ್ರ ಸಿಂಗ್ ವಿರುದ್ಧ 29-5 ಮತಗಳಿಂದ ಸುಲಭ ಗೆಲುವು ಸಾಸಿದರು. ಮೂಲಗಳ ಪ್ರಕಾರ ಅಧ್ಯಕ್ಷ ಚೌಬೆ ಮತ್ತು ಹ್ಯಾರಿಸ್ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.