ಮೇಕೆದಾಟು ಪಾದಯಾತ್ರೆ ಸಂಪೂರ್ಣ ರಾಜಕೀಯ ಕಾರಣಕ್ಕಾಗಿ ನಡೆದಿರೋದು. ಐದು ವರ್ಷ ಕಾಂಗ್ರೆಸ್ ಸರ್ಕಾರ ಇದ್ದಾಗ ಯಾಕೆ ಮಾಡಲಿಲ್ಲ. ನಮಗೆ ದೇವೇಗೌಡರೇ ರಾಷ್ಟ್ರೀಯಮಟ್ಟದ ನಾಯಕರು. ನಮ್ಮಲ್ಲಿ ಚೋಟಾಮಟ್ಟದ ಕಾರ್ಯಕರ್ತರೇ ನಾಯಕರು ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಎರಡು ಭಾರಿ ಸಿಎಂ ಆಗಿದ್ದಾಗಲೂ ಸ್ವತಂತ್ರ ಸರ್ಕಾರ ಇರಲಿಲ್ಲ. ಹಾಗಾಗಿ ನೀರಾವರಿ ಯೋಜನೆಗಳನ್ನ ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಎರಡನೇ ಭಾರಿ ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್ ನ ಮಹಾನುಭಾವರು ನೀರಾವರಿ ಸಚಿವರಾಗಿದ್ದರು. ನೀರಾವರಿ ಯೋಜನೆಗಳ ಬಗ್ಗೆ ನಾನು ನೀರಾವರಿ ಸಚಿವರನ್ನು ಕೇಳಿದಾಗ, ಇದಕ್ಕೆ ಮಧ್ಯಪ್ರವೇಶಿಸಬೇಡಿ ಎನ್ನುತ್ತಿದ್ದರು. ಮೇಕೆದಾಟು ಪಾದಯಾತ್ರೆ ಸಂಪೂರ್ಣ ರಾಜಕೀಯ ಕಾರಣಕ್ಕಾಗಿ ನಡೆದಿರೋದು. ಐದು ವರ್ಷ ಕಾಂಗ್ರೆಸ್ ಸರ್ಕಾರ ಇದ್ದಾಗ ಯಾಕೆ ಮಾಡಲಿಲ್ಲ ಎಂದು ಗುಡುಗಿದರು.




