ಸಾಯಿ ಪಲ್ಲವಿ ವೃತ್ತಿ ಜೀವನದಲ್ಲಿ ವೈದ್ಯರಾಗಿದ್ದು, 2015 ರಲ್ಲಿ ‘ಪ್ರೇಮಂ’ ಎಂಬ ಮಲಯಾಳಂ ಸಿನಿಮಾದ ಮೂಲಕ ಮೊದಲ ಬಾರಿ ನಟಿಸಿ ತೆರೆ ಮೇಲೆ ಕಾಣಿಸಿಕೊಂಡರು. ನಂತರ 1016 ರಲ್ಲಿ ‘ಕಾಳಿ’ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿದರು. 1017 ರಲ್ಲಿ ತೆಲುಗು ಚಿತ್ರರಂಗದಲ್ಲಿ ‘ಫಿದಾ’ ಚಿತ್ರದಲ್ಲಿ ಅಭಿನಯಿಸಿದರು. 1018 ರಲ್ಲಿ ವಿಜಯ್ ನಿರ್ದೇಶಿಸಿದ ದಿಯಾ ಶೀರ್ಷಿಕೆಯೊಂದಿಗೆ ಇವರು ತಮಿಳು ಚಿತ್ರರಂಗದಲ್ಲಿ ಚೊಚ್ಚಲ ಪ್ರವೇಶ ಮಾಡಿದರು. ಹಾಗೂ ಸಾಕಷ್ಟು ಸಿನಿಮಾ ಮಾಡುವ ಮೂಲಕ ನಟನ ಜೀವನವನ್ನು ಮುಂದುವರಿಸಿದ್ದಾರೆ. ಅದಷ್ಟೇ ಅಲ್ಲದೆ ಇವರು ನರ್ತಕಿಯಾಗಿ ಕೂಡ ಜನಪ್ರಿಯತೆ ಗಳಿಸಿದ್ದಾರೆ.
ಇದೀಗ ಸಾಯಿ ಪಲ್ಲವಿ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜನ್ಮದಿನದ ಶುಭಾಶಯ ತಿಳಿಸಿದ ಎಲ್ಲರಿಗೂ ಸಾಯಿ ಪಲ್ಲವಿ ಖುಷಿಯ ವಿಷಯ ಒಂದನ್ನ ಹಂಚಿಕೊಂಡಿದ್ದಾರೆ. ಅದೇನಪ್ಪ ಅಂದ್ರೆ, ಅವರು ‘ಗಾರ್ಗಿ’ ಸಿನಿಮಾ ಶೂಟಿಂಗ್ ಜೊತೆಗೆ ಡಬ್ಬಿಂಗ್ ಮುಗಿಸಿರುವ ಕುರಿತು ಮಾಹಿತಿಯನ್ನ ನೀಡಿದ್ದಾರೆ. ಅದಷ್ಟೇ ಅಲ್ಲದೆ ಈ ಬಾರಿ ಕನ್ನಡಿಗರಿಗೂ ಕೂಡ ಸಾಯಿ ಪಲ್ಲವಿ ಉಡುಗೊರೆ ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕೆಲ ಕಲಾವಿದರು ಕನ್ನಡ ಮಾತನಾಡುವ ಬದಲು ಇಂಗ್ಲಿಷ್ ಬಳಸುತ್ತಾರೆ ಎಂಬ ಆರೋಪ ಇದೆ. ಆದರೆ ತಮಿಳುನಾಡು ಮೂಲದ ನಟಿ ಸಾಯಿ ಪಲ್ಲವಿ ಕನ್ನಡ ಮಾತನಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಸಾಯಿ ಪಲ್ಲವಿ ಅವರ ಮುಂಬರುವ ‘ಗಾರ್ಗಿ’ ಸಿನಿಮಾದ ಮೆಕಿಂಗ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟುದಿನ ಈ ಚಿತ್ರದ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಇದೀಗ ಸದ್ದಿಲ್ಲದೆ ಈ ಸಿನಿಮಾದ ಶೂಟಿಂಗ್ ಹಾಗೂ ಡಬ್ಬಿಂಗ್ ಕೂಡ ಮುಗಿಸಿದ್ದಾರೆ. ಗಾರ್ಗಿ ಎಂದರೆ ಪುರಾಣ ಕಾಲದ ದಿಟ್ಟ ಮಹಿಳೆ ವಿದ್ವಾಂಸೆ.
“ಈ ಸಿನಿಮಾ ಬಗ್ಗೆ ಹೇಳಬೇಕು ಎಂದು ನಾನು ಕೆಲ ತಿಂಗಳುಗಳ ಕಾಲ ಕಾದೆ. ಕೊನೆಗೂ ನನ್ನ ಹುಟ್ಟುಹಬ್ಬದ ದಿನ ಈ ವಿಷಯ ಹೇಳಲು ಚಿತ್ರತಂಡ ಅನುಮತಿ ನೀಡಿದೆ. ಗಾರ್ಗಿ ನಿಮ್ಮ ಮುಂದೆ ಇದೆ” ಎಂದು ಸಾಯಿ ಪಲ್ಲವಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಸಿನಿಮಾ ತೆಲುಗು, ತಮಿಳು, ಕನ್ನಡ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಶೀಘ್ರದಲ್ಲಿಯೇ ಈ ಚಿತ್ರದ ಟೀಸರ್ ಕೂಡ ರಿಲೀಸ್ ಆಗಲಿದೆಯಂತೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಅವರೇ ಕನ್ನಡ ಕಲಿತಿದ್ದಾರೆ, ಕನ್ನಡ ಪದ ಉಚ್ಛಾರ ಮಾಡುವುದು ಸಾಯಿ ಪಲ್ಲವಿಗೆ ಸುಲಭ ಇರಲಿಲ್ಲ. ಎಡೆಬಿಡದೆ ಪ್ರಯತ್ನ ಹಾಕಿ ಸಾಯಿ ಪಲ್ಲವಿ ಅವರು ಪದೇ ಪದೇ ಉಚ್ಛಾರ ಮಾಡಿ ಕನ್ನಡ ಮಾತನಾಡಿದ್ದಾರೆ. ಸಾಯಿ ಪಲ್ಲವಿ ಅವರು ಹೇಗೆ ಕನ್ನಡ ಕಲಿತರು ಎಂಬ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ. ಸಿನಿಮಾಕ್ಕಾಗಿ ಕನ್ನಡ ಕಲಿತು ಮಾತನಾಡುವ ಶ್ರಮ ಹಾಕಿದ ಸಾಯಿ ಪಲ್ಲವಿ ಕಂಡು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಸಾಯಿ ಪಲ್ಲವಿ ಅವರು ಬಡಗ ಮೂಲಕ್ಕೆ ಸೇರಿದವರು. ಬಡಗರು ತಮಿಳುನಾಡಿನ ನೀಲಿಗಿರಿ ಜಿಲ್ಲೆಯಲ್ಲಿ ವಾಸ ಮಾಡುತ್ತಾರೆ. ಕನ್ನಡ ಮಿಶ್ರಿತ ಬಡಗ ಭಾಷೆಯನ್ನು ಅವರ ಮನೆಯಲ್ಲಿ ಮಾತನಾಡುತ್ತಾರೆ ಎಂಬುದು ತಿಳಿದು ಬಂದಿದ್ದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ