ಮಸೀದಿಗಳಲ್ಲಿ ಧ್ವನಿವರ್ಧಕ ತೆರವುಗೊಳಿಸಿ: ಹಲಾಲ್ ಬಳಿಕ ಹೆಚ್ಚಾದ ಒತ್ತಡ

ಬೆಂಗಳೂರು: ರಾಜ್ಯದಲ್ಲಿ ಹಲಾಲ್ ಕಟ್ ನಿಷೇಧ ಅಭಿಯಾನದ ಬಳಿಕ, ಈಗ ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿ ಧ್ವನಿ ವರ್ಧಕ ತೆರವುಗೊಳಿಸುವಂತೆ ಒತ್ತಾಯ ಹೆಚ್ಚಾಗಿದೆ. ರಾಜ್ಯದ ವಿವಿದೆಡೆ ಮಸೀಧಿಗಳಲ್ಲಿ ಅಜಾನ್ ಅನ್ನು ಧ್ವನಿ ವರ್ಧಕ ಬಳಸಿ ಕೂಗಲಾಗುತ್ತಿದೆ. ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ.

ಹಿಜಾಬ್, ಹಲಾಲ್ ಕಟ್ ಬಳಿಕ, ಈಗ ರಾಜ್ಯದಲ್ಲಿ ಮಸೀದಿಗಳಲ್ಲಿನ ಧ್ವನಿ ವರ್ಧಕ ತೆರವಿಗೆ ಒತ್ತಾಯ ಹೆಚ್ಚಾಗಿದೆ. ಯುಗಾದಿ ನಂತ್ರ ರಂಜಾನ್ ಉಪವಾಸ ಸಂದರ್ಭದಲ್ಲಿಯೇ ಈ ಆಗ್ರಹ ಹೆಚ್ಚಾಗಿದೆ. ಧ್ವನಿ ವರ್ಧಕದಿಂದ ಹಿರಿಯ ನಾಗರೀಕರು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಮಸೀಧಿಗಳಲ್ಲಿ ಧ್ವನಿ ವರ್ಧಕ ಬಳಸಿ ಮಾಡುವಂತ ಅಜಾನ್ ನಿಲ್ಲಿಸುವಂತೆಯೂ ಒತ್ತಾಯಿಸಲಾಗಿದೆ.

About The Author