Tumakuru News: ತುಮಕೂರು: ಪ್ರೇಮಿಗಳ ಮಧ್ಯೆ ಜಗಳವಾಗಿ ಹುಚ್ಚು ಪ್ರೇಮಿಯೋರ್ವ ಕಾರ್ ಬ್ಲಾಸ್ಟ್ ಮಾಡಿಕ“ಂಡು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ, ಶಿರಾ ತಾಲೂಕಿನ, ಜೋಗಿಹಳ್ಳಿ ಬಳಿ ಘಟನೆ ನಡೆದಿದ್ದು, ಬೆಂಗಳೂರು ಮೂಲದ ನಾಗೇಂದ್ರ(30) ಸಜೀವ ದಹನವಾಗಿದ್ದಾನೆ. ಆದರೆ ಈತನ ಜತೆಗಿದ್ದ ಈತನ ಪ್ರೇಯಸಿ ರಮ್ಯಾಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇಲರಿಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಹೀಗಾಗಿ ಬೆಂಗಳೂರಿನಿಂದ ಅಂಕೋಲಾಗೆ ಹೋಗಲು ಪ್ಲಾನ್ ಮಾಡಿದ್ದ ನಾಗೇಂದ್ರ ಕಾರಿನಲ್ಲಿ ಸ್ಪೋಟಕವಿರಿಸಿದ್ದ. ಕಾರಿನಲ್ಲಿ ಮತ್ತೆ ಜಗಳ ಶುರು ಮಾಡಿ, ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರ್‌ನಲ್ಲಿದ್ದ ಸ್ಪೋಟಕವನ್ನು ಸ್ಪೋಟಿಸಿ, ತಾನೂ ಸತ್ತು ರಮ್ಯಾಳನ್ನು ಸಾಯಿಸಲು ನೋಡಿದ್ದಾನೆ. ಆದರೆ ಅದೃಷ್ಟವಶಾತ್ ರಮ್ಯಾ ಬಚಾವಾಗಿದ್ದು, ನಾಗೇಂದ್ರ ಸಾವನ್ನಪ್ಪಿದ್ದಾನೆ.
ಇನ್ನು ಈ ಘಟನೆ ಬಗ್ಗೆ ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ದೂರು ದಾಖಲಾಗಿದ್ದು, ಪೋಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಿಂದಾಗಿ, ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರಿಗೆ ಅಡಚಣೆಯಾಗಿತ್ತು.




