www.karnatakatv.net :ಬೆಳಗಾವಿ: ಜಿಲ್ಲೆಯಲ್ಲಿ ತೆರವುಗೊಳಿಸಬೇಕಾದ 46 ಧಾರ್ಮಿಕ ಕೇಂದ್ರಗಳಿದ್ದು, ಅವುಗಳಲ್ಲಿ ಈಗಾಗಲೇ 17 ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲಾಗಿದೆ ಇನ್ನುಳಿದ ಧಾರ್ಮಿಕ ಕೇಂದ್ರಗಳನ್ನ ಕೂಡಾ ತೆರವುಗೊಳಿಸಲಾಗುವುದು ಎಂದು ಡಿಸಿ ಎಂ.ಜಿ.ಹಿರೇಮಠ ಹೇಳಿದ್ದಾರೆ.
ನಗರದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈಗ ಒಟ್ಟು 39 ದೇವಸ್ಥಾನಗಳನ್ನು ತೆರವು ಮಾಡಬೇಕಿದೆ. ಅಲ್ಲದೆ ನಿಪ್ಪಾಣಿ ತಾಲೂಕಿನಲ್ಲಿ ನಾಲ್ಕು ಧಾರ್ಮಿಕ ಕೇಂದ್ರಗಳನ್ನು ಸ್ಥಳಾಂತರ ಮಾಡಲು ಯೋಜನೆ ರೂಪಿಸಲಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಾಗೂ ಗಣೇಶೋತ್ಸವ ಕಾರಣದಿಂದ ಕೆಲ ದೇವಸ್ಥಾನಗಳನ್ನು ತೆರವುಗೊಳಿಸಲಿಲ್ಲ. ಗಣೇಶೋತ್ಸವ ಮುಗಿದ ಬಳಿಕ ದೇವಸ್ಥಾನದ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಳಿದ 39 ದೇವಸ್ಥಾನವನ್ನು ಯಾವುದೇ ತೊಂದರೆ ಇಲ್ಲದೆ ತೆರವುಗೊಳಿಸಲಾಗುವುದು ಎಂದರು.
ಈಗ ರಾಜ್ಯದಲ್ಲಿ ಎಲ್ಲಿ ನೋಡಿದರೂ ಹಿಂದೂ ಧಾರ್ಮಿಕ ಕೇಂದ್ರಗಳನ್ನು ನೆಲಕ್ಕುರುಳಿಸಲಾಗುತ್ತಿದೆ ಎಂಬುದೇ ದೊಡ್ಡ ವಿಚಾರವಾಗಿದೆ. ಇನ್ನು ಕೆಲ ಐತಿಹಾಸಿಕ ದೇವಾಲಯಗಳೂ ಕೂಡ ಈ ಲಿಸ್ಟನಲ್ಲಿವೆ ಎನ್ನುವುದು ದೇವಸ್ಥಾನ ಆಡಳಿತ ಮಂಡಳಿಯ ನಿದ್ದೆಗೆಡಿಸಿದೆ. ಇನ್ನು ಯಾವುದೆಲ್ಲ ಧಾರ್ಮಿಕ ಕೇಂದ್ರಗಳು ನೆಲಕ್ಕುರುಳಲಿವೆ ಎನ್ನೋದು ಯಕ್ಷ ಪ್ರಶ್ನೆಯಾಗಿದೆ.
ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ




