ಬೆಂಗಳೂರು: ವಿಶ್ವಾಸಮತ ಯಚನೆಗೆ ಇನ್ನು ಕೆಲವೇ ಹೊತ್ತು ಬಾಕಿಯಿರುವಂತೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಸದನದಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ರಚನೆ ಮಾಡೋದಾಗಿ ಹಕ್ಕು ಮಂಡನೆ ಮಾಡಲೇಬಾರದಿತ್ತು ಅಂತ ಸಿದ್ದು ವಾಗ್ದಾಳಿ ನಡೆಸಿದ್ದಾರೆ.
ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದ ಕ್ಷಣದಿಂದಲೂ ಸರ್ಕಾರ ಪತನಗೊಳಿಸೋದಕ್ಕೆ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿತ್ತು. ಸತತ ಪ್ರಯತ್ನದಿಂದ ಇದೀಗ ನಮ್ಮ ಶಾಸಕರನ್ನು ಸೆಳೆದಿದ್ದು ವಾಮಮಾರ್ಗದಲ್ಲಿ ಅಧಿಕಾರಕ್ಕೇರಲು ಹೊರಟಿದೆ ಅಂಗ ವಾಗ್ದಾಳಿ ನಡೆಸಿದ್ರು. ಮೈತ್ರಿ ಸರ್ಕಾರ ಬೀಳಿಸೋದಕ್ಕೆ ನೀವು ಪಕ್ಷಾಂತರ ಮಾಡಿಸೋದಕ್ಕೆ ಶುರುವಿಟ್ಟುಕೊಂಡ್ರಿ. ಇನ್ನು ಯಡಿಯೂರಪ್ಪ ಸರ್ಕಾರ ರಚಿಸೋದಾಗಿ ಹಕ್ಕು ಮಂಡನೆ ಮಾಡಲೇಬಾರದಿತ್ತು, ಯಾಕಂದ್ರೆ ನಮ್ಮ ಸಮ್ಮಿಶ್ರ ಸರ್ಕಾರದ ಶಾಸಕರಲ್ಲದೆ ನಿಮಗೆ ಬೆಂಬಲ ನೀಡಲು ಕೇವಲ ಒಬ್ಬ ಪಕ್ಷೇತರ ಶಾಸಕ ಮಾತ್ರ ಇದ್ದರು. ಹೀಗಿದ್ದಾಗ ನೀವು ಹೇಗೆ ಮಂಡನೆ ಮಾಡಿದ್ರಿ, ಒಬ್ಬ ಪಕ್ಷೇತರ ಶಾಸಕನನ್ನು ಇಟ್ಟುಕೊಂಡು ನೀವು ಸರ್ಕಾರ ನೀಡಲು ಹೇಗೆ ಸಾಧ್ಯವಾಗುತ್ತಿತ್ತು ಅಂತ ಹೇಳಿದ ಸಿದ್ದರಾಮಯ್ಯ, ನಮ್ಮ ಶಾಸಕರನ್ನು ಸೆಳೆಯುವ ದುರುದ್ದೇಶದಿಂದಲೇ ನೀವು ಮಂಡನೆ ಮಾಡಿದ್ರಿ ಅಂತ ಎಲ್ಲರಿಗೂ ತಿಳಿದಿದೆ ಅಂತ ಕಿಡಿ ಕಾರಿದ್ರು.
ಇನ್ನು ಮುಂದುವರಿದು ಮಾತನಾಡಿದ ಸಿದ್ದರಾಮಯ್ಯ ಪಕ್ಷಾಂತರ ಅನ್ನೋದು ಒಂದು ರೋಗ, ಇದರಿಂದ ಉಳಿಗಾಲವಿಲ್ಲ. ಅದನ್ನು ನಿರ್ನಾಮ ಮಾಡಲು ಕ್ರಮ ತೆಗೆದುಕೊಳ್ಳಲೇಬೇಕು ಇಲ್ಲದಿದ್ದರೆ ಎಲ್ಲೆಡೆ ಈ ರೋಗ ಹರಡುತ್ತೆ ಅಂತ ಸಿದ್ದರಾಮಯ್ಯ ಇದೇ ವೇಳೆ ಸಲಹೆ ನೀಡಿದ್ರು.