Saturday, October 5, 2024

Latest Posts

‘ಅತೃಪ್ತರನ್ನು ಅನರ್ಹಗೊಳಿಸಿದ್ರೆ ನಿಮಗ್ಯಾಕೆ ಹೊಟ್ಟೆ ಉರಿ..?’- ಬಿಜೆಪಿಗೆ ಸಿದ್ದು ಪ್ರಶ್ನೆ

- Advertisement -

ಬೆಂಗಳೂರು: ಪಕ್ಷಾಂತರಿಗಳನ್ನು ಅನರ್ಹಗೊಳಿಸಿದ್ರೆ ನೀವು ಯಾಕೆ ಸುಮ್ಮೆ ಹೊಟ್ಟೆ ಉರಿದುಕೊಳ್ತೀರಾ ಅಂತ ಸಿಎಲ್ ಪಿ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ನಮಗೂ ಕಾಂಗ್ರೆಸ್-ಜೆಡಿಎಸ್ ನ ಅತೃಪ್ತ ಶಾಸಕರಿಗೂ ಯಾವುದೇ ರೀತಿ ಸಂಬಂಧ ಇಲ್ಲ, ನಾವು ಆಪರೇಶನ್ ಕಮಲ ನಡೆಸಿಲ್ಲ, ಕೇವಲ ಪಕ್ಷೇತರ ಶಾಸಕರನ್ನು ಮಾತ್ರ ಬೆಂಬಲಿಸುವಂತೆ ಕೇಳಿಕೊಂಡಿದ್ದೇವೆ ಅಂತ ಪ್ರತಿಪಾದಿಸುತ್ತಿರುವ ಬಿಜೆಪಿಗೆ ಸಿದ್ದರಾಮಯ್ಯ ತಾರ್ಕಿಕ ಪ್ರಶ್ನೆ ಕೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರೋ ಸಿದ್ದರಾಮಯ್ಯ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪಕ್ಷಾಂತರಿ ಶಾಸಕರನ್ನು ವಿಧಾನಸಭಾ ಅಧ್ಯಕ್ಷರು ಅನರ್ಹಗೊಳಿಸಿದರೆ, ಬಿಜೆಪಿ ನಾಯಕರು ಹೊಟ್ಟೆ ಉರ್ಕೊಳ್ಳೋದು ಯಾಕೆ? ಅವರ ಮೇಲೆ ಈ ಪರಿಯ ಕಾಳಜಿ ಯಾಕೆ? ಅವರೇನು ಇವರ ಪಕ್ಷದ ಶಾಸಕರೇ? ಅಂತ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಇನ್ನು ಸ್ಪೀಕರ್ ಅತೃಪ್ತರನ್ನು ಅನರ್ಹಗೊಳಿಸುತ್ತಿದ್ದಂತೆ ಕೆರಳಿದ ಬಿಜೆಪಿ, ಈ ಕ್ರಮ ಸರಿಯಲ್ಲ, ಸ್ಪೀಕರ್ ಸಂವಿಧಾನ ಬಾಹಿರವಾಗಿ ಕ್ರಮ ತೆಗೆದುಕೊಂಡಿದ್ದಾರೆ ಅಂತೆಲ್ಲಾ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ಕುರಿತು ಸಹಜವಾಗಿಯೇ ಕಾಂಗ್ರೆಸ್ ಇದೀಗ ಬಿಜೆಪಿಯನ್ನು ಪ್ರಶ್ನಿಸಿದೆ.

- Advertisement -

Latest Posts

Don't Miss