Saturday, July 27, 2024

Latest Posts

ಗಡಿ ವಿಚಾರದ ಕುರಿತು ರಾಜ್ಯದ ಹಿತ ಕಾಪಾಡುವ ನಿಲುವು ಅಚಲವಾಗಿದೆ : ಸಿಎಂ ಬಸವರಾಜ ಬೊಮ್ಮಾಯಿ

- Advertisement -

ಬೆಳಗಾವಿ: ಗಡಿ ವಿಚಾರದ ಬಗ್ಗೆ ರಾಜ್ಯದ ಹಿತ ಕಾಪಾಡುವ ನಿಲುವು ಅಚಲವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನ ಸಭೆಯಲ್ಲಿ ಸಿದ್ದರಾಮಯ್ಯ ಅವರು ಮಂಡಿಸಿದ ನಿಲುವಳಿ ಸೂಚನೆಗೆ ಪ್ರತಿಕ್ರಿಯಿಸಿ ಈ ನಿಲುವಿನಿಂದ ಒಂದಿಂಚು ಹಿಂದೆ ಸರಿಯುವುದಿಲ್ಲ., ಈ ಕುರಿತು ವಿಧಾನ ಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಸ್ವೀಕರಿಸಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದದ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಗಡಿ ವ್ಯಾಜ್ಯಗಳು ಸಂವಿಧಾನಬದ್ಧವಾಗಿ ಸಂಸತ್ತಿನಲ್ಲಿಯೇ ಪರಿಹಾರವಾಗಬೇಕು ಆದ್ದರಿಂದ,ನ್ಯಾಯಾಲಯದಲ್ಲಿ ಮಹಾರಾಷ್ಟ್ರ ಸರ್ಕಾರ ದಾಖಲಿಸಿರುವ ಪ್ರಕರಣ ನಿರ್ವಹಣೆಯಾಗಬೇಕೆ ಎಂಬುದರ ಬಗ್ಗೆಯೇ ಈಗ ವಿಚಾರಣೆ ನಡೆಯುತ್ತಿದೆ. ಪ್ರಕರಣ ವಿಚಾರಣೆಗೆ ಬಂದ ಕೂಡಲೇ ಮಹಾರಾಷ್ಟ್ರ ಮುಖ್ಯಮಂತ್ರಿಗಳು ನೀಡಿದ ಪ್ರತಿಕ್ರಿಯೆಗೆ ಅವರೂ ಕೂಡ ತೀಕ್ಷ್ಣ ಉತ್ತರ ನೀಡಿರುವುದಾಗಿ ಮುಖ್ಯಮಂತ್ರಿಗಳು ಹೇಳಿದರು.

‘ಭಾರತ್ ಜೋಡೋ’ ಯಾತ್ರೆ ಕೊರೊನಾ ಪ್ರೋಟೋಕಾಲ್ ಮುರಿಯುತ್ತಿದೆ, ನಿಯಮಗಳನ್ನು ಅನುಸರಿಸಿ ಅಥವಾ ಯಾತ್ರೆಯನ್ನು ಮುಂದೂಡಿ : ರಾಹುಲ್ ಗಾಂಧಿಗೆ ಆರೋಗ್ಯ ಸಚಿವ ಪತ್ರ
ಮಹಾರಾಷ್ಟ್ರದ ಮಂತ್ರಿಗಳು,ಸಂಸದರು ರಾಜ್ಯಕ್ಕೆ ಪ್ರವೇಶಿಸದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರಕ್ಕೆ ಬರೆದಿರುವ ಪತ್ರ ಮಹತ್ವದ ದಾಖಲೆಯಾಗಲಿದೆ. ಮಹಾರಾಷ್ಟ್ರದ ರಾಜಕಾರಣಿಗಳು,ಸಂಘಟನೆಗಳು ಪ್ರಚೋದನಕಾರಿ ಹೇಳಿಕೆ ನೀಡಿ ಉದ್ವಿಗ್ನ ವಾತಾವರಣ ಉಂಟು ಮಾಡಲು ಪ್ರಯತ್ನಿಸಿದರೂ ಕೂಡ ,ನಮ್ಮ ರಾಜ್ಯದ ಆಡಳಿತ ಪಕ್ಷವಾಗಲಿ,ಪ್ರತಿಪಕ್ಷಗಳಾಗಲಿ ,ಸಂಘಟನೆಗಳಾಗಲಿ ಇಂತಹ ಯಾವುದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡದೇ ಸಂಯಮ ,ಜವಾಬ್ದಾರಿ ತೋರಿಸಿವೆ ಎಂದು ಅವರು ತಿಳಿಸಿದರು.

ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನಲ್ಲಿ ಸಕತ್‌ ಕಿರಿಕ್‌

ಚೀನಾ ಶೂನ್ಯ ಕೋವಿಡ್ ನೀತಿಯನ್ನು ಬದಲಾಯಿಸಿದರೆ 1.3 ರಿಂದ 2.1 ಮಿಲಿಯನ್ ಜನರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ..!

- Advertisement -

Latest Posts

Don't Miss