www.karnatakatv.net : ಹುಬ್ಬಳ್ಳಿ: ಸಿಎಂ ಆದ ಮೇಲೆ ಮೊದಲ ಬಾರಿಗೆ ತಮ್ಮ ನಿವಾಸಕ್ಕೆ ಬಸವರಾಜ ಬೊಮ್ಮಾಯಿ ಆಗಮಿಸಿದ್ರು. ಗಂಡು ಮೆಟ್ಟಿದ ನಾಡಿನ ಬಗ್ಗೆ ಅಪಾರ ಕಾಳಜಿ ಹಾಗು ಆಭಿಮಾನ ಹೊಂದಿರೋ ಸಿಎಂ ಹುಬ್ಬಳ್ಳಿ ಅಭಿವೃದ್ಧಿ ಬಗ್ಗೆ ಈಗಾಗಲೇ ಚಿಂತನೆ ನಡೆಸಿದ್ದಾರೆ.
ನಿನ್ನೆ ಸಂಜೆ ಬೆಳಗಾವಿಯಿಂದ ನೇರವಾಗಿ ಹುಬ್ಬಳ್ಳಿಯ ತಮ್ಮ ಸ್ವಗೃಹಕ್ಕೆ ಆಗಮಿಸಿದ ಸಿಎಂ ಕಾಣಲು ಜನರ ದಂಡು ಆಗಮಿಸಿತ್ತು. ಅವರ ಅಹವಾಲು ಸ್ವೀಕರಿಸಿದ ಸಿಎಂ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ರಾಜ್ಯಕ್ಕೆ ಸಿಎಂ ಆದರೂ ನಾನು ಹುಬ್ಬಳ್ಳಿಯವನು ಎನ್ನುವ ಮೂಲಕ ಗಂಡು ಮೆಟ್ಟಿದ ನಾಡಿನ ಬಗೆಗಿನ ಪ್ರೇಮ ಮೆರೆದ್ರು.
ಇನ್ನು ಹುಬ್ಬಳ್ಳಿಯನ್ನು ಕೈಗಾರಿಕಾ ಹಬ್ ಮಾಡುವ ಇಂಗಿತ ವ್ಯಕ್ತಪಡಿಸಿದ ಬೊಮ್ಮಾಯಿ ಮುಂದಿನ ದಿನಗಳಲ್ಲಿ ಉಸ್ತುವಾರಿ ನೇಮಕ ಕುರಿತು ಪ್ರಸ್ತಾಪಿಸಿದರು. ರೇಬಲ್ ಆಗಿರುವ ಆನಂದ್ ಸಿಂಗ್ ತಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಅಂತಲೂ ಸಹ ಹೇಳಿದ್ರು.
ಇನ್ನು ಇದೇ ವೇಳೆ ಶಾಸಕ ಅರವಿಂದ ಬೆಲ್ಲದ್ ಸೇರಿದಂತೆ ಇತರೆ ಟಿಕೆಟ್ ಆಕಾಂಕ್ಷಿಗಳು ಸಿಎಂ ಭೇಟಿ ಮಾಡಿ ಚರ್ಚಿಸಿದ್ರು. ಒಟ್ಟಾರೆ ಸಿಎಂ ಹುಬ್ಬಳ್ಳಿ ಭೇಟಿ ಹಲವು ಅಭಿವೃದ್ಧಿ ಯೋಜನೆ ಜೊತೆಗೆ ಪಾಲಿಕೆ ಚುನಾವಣೆ ಕುರಿತಾಗಿ ಮಹತ್ವ ಪಡೆದುಕೊಂಡಿದೆ.
ಕರ್ನಾಟಕ ಟಿವಿ ಹುಬ್ಬಳ್ಳಿ