www.karnatakatv.net : ರಾಯಚೂರು : ಶ್ರೀಗುರು ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. ಇಂದಿನಿಂದ ಅಗಸ್ಟ್ 27 ರವರೆಗೆ ನಡೆಯಲಿರುವ ರಾಯರ ಆರಾಧನೆಗೆ ಈಗಾಗಲೇ ದೇಶದ ನಾನಾ ಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ.
ಹೌದು.. ತುಂಗೆಯ ತಟದಲ್ಲಿರೋ ಮಂತ್ರಾಲಯದ ಶ್ರೀಮಠದಲ್ಲಿ ಈಗಾಗಲೇ ಆರಾಧನೆಯ ಹಿನ್ನೆಲೆಯಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀಮಠದ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಕ್ತರು ಕಣ್ತುಂಬಿಕೊಳಲು ಅನುವಾಗುವಂತೆ ಭವ್ಯ ವೇದಿಕೆ ನಿರ್ಮಿಸಲಾಗಿದೆ.
ಇನ್ನೂ ಶ್ರೀ ಮಠ ಈಗಾಗಲೇ ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿದೆ. ಕಾರ್ಯಕ್ರಮಕ್ಕೆ ಧ್ವಜಾರೋಹಣದ ಮೂಲಕ ಪೀಠಾದಿಪತಿಗಳಾದ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ಬಳಿಕ ಗಜಪೂಜೆ, ಗೋವು ಪೂಜೆ, ಲಕ್ಷ್ಮಿಪೂಜೆ, ಧಾನ್ಯಪೂಜೆ, ಪ್ರಭಾ ಉತ್ಸವ ನೆರವೇರಿತು. ಇಂದು ಋಗ್ವೇದ, ಯಜುರ್ವೇದ ಉಪಾಕರ್ಮ ನಡೆಯಲಿದ್ದು, ರಜತ ಮಂಟಪೋತ್ಸವ ಹಾಗೂ ಶಾಕೋತ್ಸವ ನಡೆಯಲಿದೆ. ಇನ್ನು ನಾಳೆ ಶ್ರೀರಾಯರ ಪೂರ್ವಾರಾಧನೆ, ಆಗಸ್ಟ್ 24 ರಂದು ಮಧ್ಯಾರಾಧನೆ ಹಾಗೂ ಆಗಸ್ಟ್ 25 ರಂದು ಉತ್ತರಾರಾಧನೆ ಜರುಗಲಿದ್ದು, ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು, ಉಪನ್ಯಾಸ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು