10K ಟಿಸಿಎಸ್ ಓಟಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು : ಟಿ. ಸಿ.ಎಸ್ ಆಯೋಜಿಸಿರುವ 10 ಕೆ ರನ್ ಎಲ್ಲರ ಜೀವನದಲ್ಲಿ ಈ ಓಟ ಹೊಸ ಚೈತನ್ಯವನ್ನು ತರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಅವರು ಇಂದು ಟಿಸಿಎಸ್ ಸಂಸ್ಥೆ ಕಂಠೀರವ ಸ್ಟುಡಿಯೋದಲ್ಲಿ ಆಯೋಜಿಸಿದ್ದ ವರ್ಲ್ಡ್ ಪ್ರೀಮಿಯರ್ 10 ಕೆ ರನ್ – ಗೆ ಚಾಲನೆ ನೀಡಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, 10 ಕೆ ರನ್ ನಲ್ಲಿ 17 ಸಾವಿರಕ್ಕಿಂತ ಹೆಚ್ಚು ಜನ ಭಾಗವಹಿಸಿ ಹಿರಿಯರು, ವಿಕಲಚೇತನರು ತಮ್ಮ ಆರೋಗ್ಯ, ದೇಶಕ್ಕಾಗಿ ಹಾಗೂ ಜೀವನದ ಉತ್ಸಾಹಕ್ಕಾಗಿ ಓಡುತ್ತಿದ್ದಾರೆ. ಕಾರ್ಯಕ್ರಮ ಆಯೋಜಿಸಿ ಟಿ.ಸಿ.ಎಸ್ ಉತ್ತಮ ಕೆಲಸ ಮಾಡಿದೆ ಎಂದರು.

ಅನೇಕ ಸರ್ಕಾರೇತರ ಸಂಸ್ಥೆಗಳು ಈ ವೇದಿಕೆಯ ಮೂಲಕ ತಮ್ಮ ಸಾಮಾಜಿಕ ಕೆಲಸಕ್ಕೆ ದೇಣಿಗೆಯನ್ನು ಸಂಗ್ರಹಕ್ಕೆ ಅವಕಾಶ ಕಲ್ಪಿಸಿಕೊಟ್ಟು ಸಾಮಾಜಿಕ ಹೊಣೆಗಾರಿಕೆಯನ್ನು ಟಿ.ಸಿ.ಎಸ್ ಸಂಸ್ಥೆ ತೋರಿದೆ ಎಂದರು.

ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಡಾ. ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.

About The Author