Wednesday, September 24, 2025

Latest Posts

ಸಿದ್ದರಾಮಯ್ಯ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯ

- Advertisement -

ಮೈಸೂರು: ಎಸ್ಸಿ ಎಸ್ಟಿ ಒಳ ಮೀಸಲಾತಿ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯ ಮಾಡಿದ್ದು, ಅರೆ ಬಾಬಾ ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ರಲ್ಲ ಏನು ಮಾಡಿದ್ರಿ ಎಂದು ಪ್ರಶ್ನೆ ಮಾಡಿದರು. ಸಮುದಾಯದ 40 ವರ್ಷದ ಬೇಡಿಕೆಯ ಬಗ್ಗೆ ಕಾಂಗ್ರೆಸ್ ಒಮ್ಮೆಯೂ ತಿರುಗಿಯೂ ನೋಡಿರಲಿಲ್ಲ.

ಐಷಾರಾಮಿ ಜೀವನ ನಡೆಸಲು ದೇವಸ್ಥಾನದ ಹುಂಡಿ ಕದಿಯುತ್ತಿದ್ದ ಸರ್ಕಾರಿ ಶಿಕ್ಷಕನ ಬಂಧನ

ನಾವು ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ  ವರದಿಯನ್ನ ಮಂಡನೆ ಮಾಡುವ ಧೈರ್ಯ ಮಾಡಲಿಲ್ಲ. ಸಿದ್ದರಾಮಯ್ಯ ನವರು ಎಸ್ಸಿ ಎಸ್ಟಿ ಸಮುದಾಯದ ಸಮಾವೇಶಕ್ಕೆ ಹೋಗಿ ಮಾತನಾಡದೆ ಬರಿ ದೀಪ ಹಚ್ಚಿ ಬಂದರು ಅಷ್ಟೇ. ಈ ಎಲ್ಲಾ ನಡೆ ನುಡಿಗಳು ಜನರ ಮನದಾಳದಲ್ಲಿದೆ. ಜನರನ್ನ ಪದೇ ಪದೇ ಮರಳು ಮಾಡಲು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಬೊಮ್ಮಯಿ ಹೇಳಿದರು.

ಗಡಿ ವಿಚಾರವಾಗಿ ಗೃಹ ಸಚಿವರು ಎರಡು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದಾರೆ : ಸಿಎಂ ಬೊಮ್ಮಾಯಿ

14 ವರ್ಷದ ಬಾಲಕಿ ಮೇಲೆ ಸಾಮೂಹಿತ ಅತ್ಯಾಚಾರ : ಮೂವರ ಬಂಧನ

- Advertisement -

Latest Posts

Don't Miss