Saturday, July 27, 2024

Latest Posts

ಕಲುಷಿತ ನೀರು ಸೇವನೆಯಿಂದ ಸಾವಿಗೀಡಾದವರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ:  ಬಸವರಾಜ ಬೊಮ್ಮಾಯಿ

- Advertisement -

ಬೆಂಗಳೂರು, ಜೂನ್ 06: ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮೂವರು ಸಾವಿಗೀಡಾಗಿರುವವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಸಂಪೂರ್ಣ ತನಿಖೆ ಮಾಡಿ ತಾಂತ್ರಿಕ ವರದಿ ಸಲ್ಲಿಸುವಂತೆ ಕೆ. ಡಬ್ಲ್ಯೂ. ಎಸ್.ಎಸ್.ಬಿ ಮುಖ್ಯ ಇಂಜಿನಿಯರ್ ಗೆ ಸೂಚಿಸಲಾಗಿದೆ. ರಾಯಚೂರಿನ ಎಲ್ಲಾ ವಾರ್ಡ್ ಗಳ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬೇಕು. ಕುಡಿಯುವ ನೀರಿನ ಸುರಕ್ಷತೆಯ ಬಗ್ಗೆ ಪ್ರಮಾಣೀಕರಣವಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳ ಲೋಪದೋಷವಿದೆಯೇ ಎಂಬ ಬಗ್ಗೆಯೂ ಅಲ್ಲಿಯ ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್ ತನಿಖೆಯನ್ನು ಕೂಡ ಕೈಗೊಳ್ಳ ಲಾಗುವುದು. ತಪ್ಪಿತಸ್ಥರಿದ್ದರೆ ಅವರ ಮೇಲೆ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದರು.

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆಯಿದೆ. ಬೇಸಿಗೆ ಕಾಲ ಬಂತAದ್ರೆ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯ. ಶುದ್ಧ ಕುಡಿಯುವ ನೀರನ್ನು ಬಿಸಿಲ ನಾಡು ರಾಯಚೂರಿನ ಜನರು ಹೆಚ್ಚಾಗಿ ಎದುರಿಸುತ್ತಿದ್ದಾರೆ. ಹೊಲ ಗದ್ದೆಗಳಿಗೆ ಬೆಳೆಗಳಿಗೆ ನೀರು ಸಿಗದೆ ಬೆಂಗಳೂರು ಮತ್ತು ರಾಜ್ಯದ ಬೇರೆ ಬೇರೆ ಭಾಗಗಳತ್ತ ಗುಳೆ ಹೋಗುವವರೂ ಉತ್ತರ ಕರ್ನಾಟಕ ಭಾಗದವರೇ ಆಗಿದ್ದಾರೆ. ಇಲ್ಲಿನ ಶುದ್ಧ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಉತ್ತರ ಕರ್ನಾಟಕ ಭಾಗದವರಾದ ಸಿ ಎಂ ಬೊಮ್ಮಾಯಿಯವರಿಗೆ ಅರಿವಿದೆ ಮತ್ತು ಹೆಚ್ಚಿನ ಕಾಳಜಿಯಿದೆ ಎನ್ನುವುದು ಈ ಮೂಲಕ ಸಾಬೀತಾಗಿದೆ.

- Advertisement -

Latest Posts

Don't Miss