Saturday, October 5, 2024

Latest Posts

‘ಐಎಂಎ ಮಾಲೀಕನೊಂದಿಗೆ ನಾನು ಬಿರಿಯಾನಿ ತಿಂದಿಲ್ಲ- ಖರ್ಜೂರ ಮಾತ್ರ ತಿಂದಿದ್ದೆ’- ಸಿಎಂ ಕುಮಾರಸ್ವಾಮಿ

- Advertisement -

ಬೆಂಗಳೂರು: ಐಎಂಎ ಜುವೆಲರ್ಸ್ ವಂಚನೆ ಪ್ರಕರಣ ಸದನದಲ್ಲಿ ಮಾರ್ದನಿಸಿತು. ಈ ಕುರಿತು ಮಾತನಾಡಿದ ಬಿಜೆಪಿ ಸದಸ್ಯ ರವಿ, ಸಿಎಂ ಕುಮಾರಸ್ವಾಮಿ ಐಎಂಎ ಮಾಲೀಕರ ಮನ್ನೂರ್ ಜೊತೆ ಕಾಣಿಸಿಕೊಂಡಿದ್ದರ ಬಗ್ಗೆ ಪ್ರಸ್ತಾಪಿಸಿದ್ರು. ಇದಕ್ಕೆ ಉತ್ತರಿಸಿದ ಸಿಎಂ ಕುಮಾರಸ್ವಾಮಿ, ನಾನು ಬಿರಿಯಾನಿ ತಿಂದಿಲ್ಲ, ಖರ್ಜೂರ ಮಾತ್ರ ಬಾಯಿಗೆ ಹಾಕಿಕೊಂಡೆ ಅಂತ ಹೇಳಿದ್ರು.

ಸದನದಲ್ಲಿ ದೋಸ್ತಿ ಮತ್ತು ವಿಪಕ್ಷ ಬಿಜೆಪಿ ಸದಸ್ಯರ ಚರ್ಚೆ ಕಾವೇರಿದೆ. ಐಎಂಎ ಜುವೆಲ್ಲರ್ಸ್ ಮಾಲೀಕನೊಂದಿಗೆ ಸಿಎಂ ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿದ್ದರ ಕುರಿತು ಪ್ರಸ್ತಾಪಿಸಿದ್ದ ಬಿಜೆಪಿಗೆ ಸಿಎಂ ಕುಮಾರಸ್ವಾಮಿ ಉತ್ತರಿಸಿದ್ರು. ನನಗೆ ಆ ವ್ಯಕ್ತಿಯ ಪರಿಚಯವೂ ಇಲ್ಲ, ಹೊಸದಾಗಿ ನಾನು ಸಿಎಂ ಆದಾಗ ಶಾಸಕರೊಬ್ಬರ ಒತ್ತಾಯದ ಮೇರೆಗೆ ನಾನು ರಂಜಾನ್ ಹಬ್ಬದ ಪ್ರಯುಕ್ತ ಮೊದಲನೆ ಬಾರಿಗೆ ಐಎಂಎ ಕಚೇರಿಗೆ ಹೋಗಿದ್ದೆ. ಆದ್ರೆ ನಾನು ಬಿರಿಯಾನಿ ತಿಂದಿಲ್ಲ. ನನಗೆ 2ನೇ ಬಾರಿಗೆ ಹೃದಯದ ಶಸ್ತ್ರಚಿಕಿತ್ಸೆಯಾದ ಬಳಿಕ ನಾನು ನಾನ್ ವೆಜ್ ತಿನ್ನೋದನ್ನು ಬಿಟ್ಟಿದ್ದೇನೆ. ಹಿಂಸೆ ತಡೆಯಲಾರದೆ ಹೋದ ನಾನು ಅದ್ಯಾವುದೋ ಖರ್ಜೂರ ಬಾಯಿಗಿಟ್ಟಿದ್ದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ರು.

ಕೇಂದ್ರ ಸರ್ಕಾರದ ಐಟಿ ಇಲಾಖೆಯಿಂದ ರಾಜ್ಯ ಪೊಲೀಸ್ ಇಲಾಖೆಯ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿಲ್ಲವೆಂಬ ಆರೋಪ ಕೇಳಿಬಂದ ಮೇಲೆ ಸ್ವತಃ ನಾನೇ ಡಿಜಿಯವರನ್ನು ಕರೆದು ನಿರ್ದೇಶನ ನೀಡಿದೆ. ವಂಚನೆ ಆರೋಪಿ ಮನ್ಸೂರ್ ಬಂಧನಕ್ಕಾಗಿ ಎಸ್ ಐಟಿ ಕೂಡ ರಚಿಸಲಾಯಿತು. ಹೀಗಾಗಿ ಇದೀಗ ಐಎಂಎ ಮಾಲೀಕ ಮನ್ಸೂರ್ ನನ್ನು ಬಂಧಿಸಲಾಗಿದೆ. ನಾವು ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಿಯಾಗಿಲ್ಲ ಅಂತ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ರು.

- Advertisement -

Latest Posts

Don't Miss